ಕುಷ್ಟಗಿ(ಕೊಪ್ಪಳ): ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಸ್ವಾಯತ್ತ ಸಂಸ್ಥೆ, ಇಲ್ಲಿ ರಾಜಕೀಯ ಇರಬಾರದು. ಏನೋ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಇದ್ದಲ್ಲಿ ಅದನ್ನು ತೆಗೆದು ಹಾಕುವ ಗಟ್ಟಿತನ ಮಹೇಶ್ ಜೋಶಿ ಅವರಿಗೆ ಇದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆಯಲ್ಲಿದ್ದಾಗ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ತೀರ್ಪು ನೀಡಿರುವುದು ಕನ್ನಡದ ಬಗ್ಗೆ ಇರುವ ಅಭಿಮಾನ. ಕನ್ನಡ ಕೆಲಸ ದೊಡ್ಡ ಪ್ರಮಾಣದಲ್ಲಿ ಆಗಬೇಕೆಂದರೆ ಕನ್ನಡ ಸಾಹಿತ್ಯ ಪರಿಷತ್ಗೆ ಮಹೇಶ್ ಜೋಶಿ ಅಧ್ಯಕ್ಷರಾದರೆ ಹೆಚ್ಚು ಅನಕೂಲ. ಜೋಶಿ ಅವರಲ್ಲಿ ದೂರದೃಷ್ಟಿ ಸೃಜನಾತ್ಮಕ ಮತ್ತು ಕ್ರಿಯಾಶೀಲವಾಗಿದ್ದು, ಕನ್ನಡದ ಬಗ್ಗೆ ನಾನು ಯಾವುದನ್ನು ಮಾಡುವುದು ಸಾಧ್ಯವಿಲ್ಲವೋ ಅದನ್ನು ಜೋಶಿಯವರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯ ಎಂದು ನಂಬಿರುವೆ.
ಡಾ.ಮಹೇಶ್ ಜೋಶಿ ಅವರು, ದೆಹಲಿಯಲ್ಲಿ ರಾಷ್ಟ್ರಪತಿ ಸಂಪರ್ಕದಲ್ಲಿದ್ದರೂ ಕೂಡ ನಿವೃತ್ತಿ ನಂತರ ಉನ್ನತ ಹುದ್ದೆಗಳಲ್ಲಿ ಮುಂದುವರಿಯುವ ಸಾಧ್ಯತೆ ಇತ್ತು. ಆದಾಗ್ಯೂ ಕನ್ನಡ ಸೇವೆಗೆ ಬಂದವರಾಗಿದ್ದು, ಕನ್ನಡ ಪ್ರಚಾರಕ್ಕಾಗಿ ಬಂದಿದ್ದೇನೆ ಹೊರತು ವ್ಯಕ್ತಿಗಾಗಿ ಅಲ್ಲ. ಇನ್ನು ಅವರು ನಮ್ಮ ಭಾಗದವರಲ್ಲ, ನಮ್ಮ ಜಾತಿಯವರಲ್ಲ, ನಮ್ಮೂರಿನವರಲ್ಲ, ನಮ್ಮ ಸಂಬಂಧಿಕರಲ್ಲ ಏನೂ ಅಲ್ಲ. ಆದರೆ ಕನ್ನಡ ಎನ್ನವುದು ಇಬ್ಬರನ್ನು ಹತ್ತಿರಕ್ಕೆ ತಂದಿದೆ ಎಂದರು.
ಓದಿ: ಫೆ.8 ರಿಂದ 12ವರೆಗೆ ಹೆಸರಘಟ್ಟದ ಐಐಹೆಚ್ಆರ್ನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ-2021