ಕೊಪ್ಪಳ : ಜಿಲ್ಲೆಯಲ್ಲಿಂದು ಹೋಳಿ ಹಬ್ಬ ರಂಗು ಪಡೆದಿದೆ. ಬೆಳಗ್ಗೆಯಿಂದಲೇ ಜನರು ಬಣ್ಣಗಳಲಿ ಮಿಂದೆದ್ದು ಸಂಭ್ರಮದಿಂದ ಹೋಳಿ ಆಚರಿಸುತ್ತಿದ್ದಾರೆ.
ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಕಳೆದ ಎರಡು ವರ್ಷ ಹೋಳಿ ಆಚರಣೆಗೆ ಬ್ರೇಕ್ ಬಿದ್ದಿತ್ತು. ಇದೀಗ ಕೋವಿಡ್ ಇಳಿಮುಖವಾಗಿರುವುದರಿಂದ ಯಾವುದೇ ಭಯವಿಲ್ಲದೆ ಜನರು ಹೋಳಿ ಹಬ್ಬ ಆಚರಿಸಿದರು. ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು, ಯುವಕರು ಪರಸ್ಪರ ಬಣ್ಣ ಎರಚಿ ಸಿನಿಮಾ ಹಾಡುಗಳಿಗೆ ಕುಣಿದು ಕಪ್ಪಳಿಸಿದರು.
ಇದನ್ನೂ ಓದಿ: ದೇಶಾದ್ಯಂತ ಕಳೆಗಟ್ಟಿದ ಹೋಳಿ ಸಂಭ್ರಮ.. ಎಲ್ಲೆಲ್ಲಿ ಹೇಗಿತ್ತು ಸಡಗರ?