ETV Bharat / state

ಕೊಪ್ಪಳದಲ್ಲಿ ಒಂದೆಡೆ ಮಳೆ ಕಾಟ ಮತ್ತೊಂದೆಡೆ ಪ್ರವಾಹ.. ಅನ್ನದಾತರಿಗೆ ಹೆಚ್ಚಿದ ಆತಂಕ - ಈಟಿವಿ ಭಾರತ ಕನ್ನಡ

ಕೊಪ್ಪಳ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ರೈತರಿಗೆ ತಾವು ಬೆಳೆದ ಬೆಳೆಗಳು ನೆಲಕಚ್ಚುವ ಆತಂಕ ಎದುರಾಗಿದೆ. ಜೊತೆಗೆ ಮಳೆಯಿಂದ ಇಲ್ಲಿನ ಹಿರೇಹಳ್ಳ ಜಲಾಶಯ ತುಂಬಿದ್ದು, ನೀರನ್ನು ಜಲಾಶಯದಿಂದ ಹೊರಬಿಡಲಾಗಿದೆ. ಹೀಗಾಗಿ ನದಿಪಾತ್ರದ ರೈತರ ಜಮೀನುಗಳು ಮುಳುಗಡೆಯಾಗಿವೆ.

heavy-rain-in-koppala
ಕೊಪ್ಪಳದಲ್ಲಿ ಒಂದೆಡೆ ಮಳೆ ಕಾಟ ಮತ್ತೊಂದೆಡೆ ಪ್ರವಾಹ.. ಅನ್ನದಾತರಿಗೆ ಹೆಚ್ಚಿದ ಆತಂಕ
author img

By

Published : Sep 8, 2022, 4:30 PM IST

ಕೊಪ್ಪಳ : ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಉಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಆತಂಕಕ್ಕೊಳಗಾಗಿದ್ದಾರೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ರೈತರ ಜಮೀನಿಗೆ ನೀರು ನುಗ್ಗಿದೆ. ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಜಲಾವೃತವಾಗಿದೆ.

ಕೆಲವೆಡೆ ಮಳೆಹೊಡೆತಕ್ಕೆ ಬೆಳೆಗಳು ಕೊಚ್ಚಿ ಹೋಗಿದ್ದು, ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ಜಿಲ್ಲೆಯ ಯಲಬುರ್ಗಾ, ಕುಕನೂರು, ಕುಷ್ಟಗಿಯಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ಇಲ್ಲಿನ ರೈತರಿಗೆ ಹಿರೇಹಳ್ಳದ ಪ್ರವಾಹ ನಿದ್ದೆಗೆಡಿಸಿದೆ.

ತುಂಬಿದ ಹಿರೇಹಳ್ಳ ಜಲಾಶಯ : ಗದಗ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯ ಭರ್ತಿಯಾಗಿದೆ. ಇದರಿಂದಾಗಿ ರೈತರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಸದ್ಯ ಜಲಾಶಯದಿಂದ 32,000 ಕ್ಯೂಸೆಕ್​​ ನೀರನ್ನು ಹಳ್ಳಕ್ಕೆ ಬಿಡಲಾಗಿದೆ. ಇದರಿಂದಾಗಿ ಹೀರೆಹಳ್ಳದ ಪಾತ್ರದಲ್ಲಿರುವ ಓಜಿನಹಳ್ಳಿ, ಕೊಳೂರ, ಕಾಟ್ರಳ್ಳಿ, ಹಿರೇಶಿಂದೋಗಿ, ಗೊಂಡಬಾಳ ಸೇರಿದಂತೆ ಅನೇಕ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕೊಪ್ಪಳದಲ್ಲಿ ಒಂದೆಡೆ ಮಳೆ ಕಾಟ ಮತ್ತೊಂದೆಡೆ ಪ್ರವಾಹ.. ಅನ್ನದಾತರಿಗೆ ಹೆಚ್ಚಿದ ಆತಂಕ

ಸಾಲದ ಸುಳಿಯಲ್ಲಿ ರೈತ : ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬೆಳೆ ಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರ ಹಾಕಿ ರೈತರು ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆ ನಿರೀಕ್ಷೆಗೂ ಮೀರಿ ಬರುತ್ತಿರುವ ಪರಿಣಾಮ ರೈತರಿಗೆ ದಿಕ್ಕೇ ತೋಚದಂತಾಗಿದೆ. ಇದರಿಂದಾಗಿ ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವ ಭೀತಿ ಎದುರಾಗಿದೆ.

ಬೆಳೆಗಳಿಗೆ ವಿವಿಧ ರೋಗಗಳ ಕಂಟಕ : ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ ಉತ್ತಮ ಫಸಲು ಬರುವ ನಿರೀಕ್ಷೆಯನ್ನು ರೈತರು ಮಾಡಿದ್ದರು. ಆದರೆ, ರೈತರ ನಿರೀಕ್ಷೆ ಹುಸಿಯಾಗಿದೆ. ಮಳೆಯೇ ಇದೀಗ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದ್ದು, ಅತಿಯಾದ ಮಳೆಯಿಂದಾಗಿ ಅಳಿದುಳಿದ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗಿವೆ.

ಇದನ್ನೂ ಓದಿ : ನದಿಗೆ ಲಕ್ಷ ಕ್ಯೂಸೆಕ್ ನೀರು: ಶ್ರೀಕೃಷ್ಣದೇವರಾಯ ಸಮಾಧಿ ಸ್ಮಾರಕ ಜಲಾವೃತ, ಸೇತುವೆ ಸಂಚಾರ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.