ಗಂಗಾವತಿ : ಜಿಲ್ಲೆಯಲ್ಲಿ 397 ಕೊರೊನಾ ಪಾಸಿಟಿವ್ ಕೇಸು ಬರಲಿವೆ ಎಂದು ಐಸಿಎಂಆರ್ ವರದಿ ಉಲ್ಲೇಖಿಸಿ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ನೀಡಿದ್ದ ಹೇಳಿಕೆ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು.
'ಈಟಿವಿ ಭಾರತ' ಸೇರಿ ಎಲ್ಲಾ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗಿತ್ತು. ಇದರಿಂದಾಗಿ ಜೆಲ್ಲೆಯ ಜನ ಆತಂಕಗೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಯೂ ನಡೆದಿತ್ತು.
![health-officer](https://etvbharatimages.akamaized.net/etvbharat/prod-images/kn-gvt-05-29-corona-possitvie-in-dist-doctor-taken-uturn-vis-kac10005_29042020180005_2904f_1588163405_954.jpg)
ಈ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವೈದ್ಯ ಡಾ. ಈಶ್ವರ ಸವುಡಿ, ಎಸ್ಪಿ, ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾದ ಬಗ್ಗೆ ಜಾಗೃತಿಯಿಂದರಬೇಕು ಎಂಬ ಉದ್ದೇಶದಿಂದ ಐಸಿಎಂಆರ್ ಉಲ್ಲೇಖಿಸಿ ಹೇಳಿಕೆ ನೀಡಲಾಗಿತ್ತು. ಆದರೆ, ಕೆಲವರು ಅದನ್ನು ತಪ್ಪಾಗಿ ಗ್ರಹಿಸಿದ್ದಾರೆ. ಲಾಕ್ಡೌನ್ ಉಲ್ಲಂಘನೆಯಾದ್ರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹೋದರೆ ಎಂಬ ಇತ್ಯಾದಿ ಮಾನದಂಡವನ್ನು ಗಂಭೀರವಾಗಿ ಅನುಸರಿಸದೇ ಹೋದ್ರೆ, ಜಿಲ್ಲಾವಾರು ಜನಸಂಖ್ಯೆ ಆಧರಿಸಿ ಐಸಿಎಂಆರ್ ಮಾಡಿರುವ ಸಮೀಕ್ಷೆಯ ವರದಿಯನ್ನು ಉಲ್ಲೇಖಿಸಿ ಹೇಳಲಾಗಿತ್ತು ಎಂದು ವಿವರಣೆ ನೀಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಹೇಳಿಕೆ ತಿರುಚಿದ್ರೂ ಆ ಬಗ್ಗೆ ತಾವು ವಿಷಾದಿಸೋದಾಗಿ ಹೇಳಿದ್ದಾರೆ.