ಗಂಗಾವತಿ: ಹನುಮದ್ ವ್ರತದ ಅಂಗವಾಗಿ ತಾಲೂಕಿನ ಅಂಜನಾದ್ರಿಯ ದೇಗುಲವನ್ನು ಮುಂಜಾನೆ ಮೂರು ಗಂಟೆಯಿಂದಲೇ ತೆರೆಯಲಾಗಿದೆ. ನಾಡಿನ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ದಟ್ಟಣೆ ತಪ್ಪಿಸಲು ಈ ವಿಶೇಷ ಪೂಜೆ ಆರಂಭಿಸಲಾಗಿದೆ.
![Hanuma Mala immersion program at Anjanadri](https://etvbharatimages.akamaized.net/etvbharat/prod-images/17114784_thumbnnews.jpg)
ಆಂಜನೇಯನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಕಿರಿದಾದ ಬೆಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. 578 ಮೆಟ್ಟಿಲುಗಳುಳ್ಳ ಬೆಟ್ಡದ ಎತ್ತರಕ್ಕೂ ಭಕ್ತರು ನೆರೆದಿದ್ದರು. ಬೆಳಗ್ಗೆ 6 ಆರು ಗಂಟೆಯಿಂದಲೇ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಭಾನುವಾರ ರಾತ್ರಿಯೇ ಬೆಟ್ಟಕ್ಕೆ ಆಗಮಿಸಿ ವಿಶ್ರಾಂತಿ ಪಡೆದಿದ್ದರು. ಬೆಳಗ್ಗೆ ಸ್ನಾನ ಮುಗಿಸಿ ದೇವರ ದರ್ಶನ ಪಡೆದು, ಮಾಲೆ ವಿರಮಣ ಮಾಡಿ ತಮ್ಮೂರಿನತ್ತ ಪಯಣ ಬೆಳೆಸುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಹೊರಟ ಮುಸ್ಲಿಂ ಮಾಲಾಧಾರಿ..