ಗಂಗಾವತಿ (ಕೊಪ್ಪಳ): ಹನುಮಮಾಲೆ ಅಂಗವಾಗಿ ಗಂಗಾವತಿಯಲ್ಲಿ ಸೋಮವಾರ ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 20 ಸಾವಿರ ಭಕ್ತರು ಭಾಗಿಯಾಗಲಿರುವ ಕಾರಣಕ್ಕೆ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.
ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ಮತೀಯ ಕಲಹಗಳು ನಡೆದಿರುವ ಹಿನ್ನೆಲೆ ಗಂಗಾವತಿಯನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಪೊಲೀಸ್ ಇಲಾಖೆ, ಶಾಂತಿಯುತ ಸಂಕೀರ್ತನಾ ಯಾತ್ರೆಗೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ಭಾನುವಾರ ಸಂಜೆ ನಗರದಲ್ಲಿ ಮಾರ್ಚ್ ಫಾಸ್ಟ್ ಮಾಡುವ ಮೂಲಕ ಇಲಾಖೆ ಜನರಲ್ಲಿ ವಿಶ್ವಾಸವನ್ನು ಮೂಡಿಸಲು ಯತ್ನಿಸಿದೆ.
ಸ್ವತಃ ಎಸ್ಪಿ ಅರುಣಾಂಗ್ಶು ಗಿರಿ ನೇತೃತ್ವ ವಹಿಸಿಕೊಂಡಿದ್ದು, ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ ಹದ್ದಿನಗಣ್ಣಿಟ್ಟಿದ್ದಾರೆ. ನಗರದಲ್ಲಿ 80ಕ್ಕೂ ಹೆಚ್ಚು ಕಡೆ ಸಿಸಿ ಕ್ಯಾಮರಾದ ಕಣ್ಗಾವಲು ಇಡಲಾಗಿದೆ. ಒಬ್ಬರು ಎಎಸ್ಪಿ, ಏಳು ಜನ ಡಿವೈಎಸ್ಪಿ, 24 ಸಿಪಿಐ, 60 ಪಿಎಸ್ಐ, 123 ಪಿಎಸ್ಐ ಸೇರಿದಂತೆ ಒಟ್ಟು 800ಕ್ಕೂ ಹೆಚ್ಚು ಜನರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ನಗರದಲ್ಲಿ 80ಕ್ಕೂ ಹೆಚ್ಚು ಕಡೆ ಸಿಸಿ ಕ್ಯಾಮರಾದ ಕಣ್ಗಾವಲು ಇಡಲಾಗಿದೆ. ಒಬ್ಬರು ಎಎಸ್ಪಿ, ಏಳುಜನ ಡಿವೈಎಸ್ಪಿ, 24 ಸಿಪಿಐ, 60 ಪಿಎಸ್ಐ, 123 ಪಿಎಸ್ಐ ಸೇರಿದಂತೆ ಒಟ್ಟು 800ಕ್ಕೂ ಹೆಚ್ಚು ಜನರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ಓದಿ: ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಕಲಬುರಗಿಯ ಹನುಮ ಮಾಲಾಧಾರಿಗಳು