ಗಂಗಾವತಿ: ಕೊರೊನಾ ಹರಡುವಿಕೆಯ ಭೀತಿಯಿಂದ ಸರ್ಕಾರ ಘೋಷಣೆ ಮಾಡಿದ್ದ ಭಾನುವಾರದ ಕರ್ಫ್ಯೂಗೆ ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಕರ್ಫ್ಯೂ ಭಾಗವಾಗಿ ನಗರದಲ್ಲಿನ ಬಹುತೇಕ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗಿದ್ದವು. ಹೀಗಾಗಿ ಕಳೆದ ಒಂದುವರೆ ತಿಂಗಳ ಹಿಂದೆ ಕಂಡು ಬಂದಿದ್ದ ಸಂಪೂರ್ಣ ಲಾಕ್ ಡೌನ್ ಚಿತ್ರಣ ಬಹುದಿನಗಳ ಬಳಿಕ ಮತ್ತೊಮ್ಮೆ ನಗರದಲ್ಲಿ ಪುನರಾವರ್ತನೆಯಾದಂತೆ ಕಂಡು ಬಂತು. ಆದರೆ ಜನರ ಓಡಾಟ ಮಾತ್ರ ಸಹಜವಾಗಿತ್ತು.
ಮಾಂಸ, ಔಷಧಿ, ಹಾಲು, ವೈದ್ಯಕೀಯ ಸೇವೆ, ಹಣ್ಣು ಮತ್ತು ತರಕಾರಿಯಂತ ಅಗತ್ಯ ಸೇವೆ, ವಸ್ತುಗಳ ಖರೀದಿಗೆ ಅನುಮತಿ ನೀಡಲಾಗಿದೆ.