ETV Bharat / state

ಗಂಗಾವತಿ ನಗರಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್​​ಗೆ ತಲಾ ಒಂದು ಮತ ಹಾಕಿದ ಪಕ್ಷೇತರ ಅಭ್ಯರ್ಥಿ - Gangawati Municipal Election

ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರಭೋಜಿರಾವ್ ಗಾಯಕ್ವಾಡ್ ಅವರು ಒಂದು ವೋಟ್ ಬಿಜೆಪಿಗೆ ಒಂದು ವೋಟ್​​ ಕಾಂಗ್ರೆಸ್​​​ಗೆ ಹಾಕಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಅವರು, ವಾರ್ಡ್​​ನಲ್ಲಿ ಅಭಿವೃದ್ಧಿ ಕೆಲಸ ಆಗಬೇಕಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವುದಾಗಿ ತಿಳಿಸಿದ್ದಾರೆ.

sharabhojirao gayakwad
ಪಕ್ಷೇತರ ಅಭ್ಯರ್ಥಿ ಶರಭೋಜಿರಾವ್ ಗಾಯಕ್ವಾಡ್
author img

By

Published : Nov 3, 2020, 6:52 AM IST

ಗಂಗಾವತಿ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಗರದ ನಾಲ್ಕನೇ ವಾರ್ಡ್​​ನ ಪಕ್ಷೇತರ ಅಭ್ಯರ್ಥಿ ಬಿಜೆಪಿ ಹಾಗೂ ಕಾಂಗ್ರೆಸ್​​ಗೆ ತಲಾ ಒಂದು ಮತ ನೀಡುವ ಮೂಲಕ ಅಚ್ಚರಿ ನಿಲುವು ತಳೆದ ಘಟನೆ ಬೆಳಕಿಗೆ ಬಂತು.

ಪಕ್ಷೇತರ ಅಭ್ಯರ್ಥಿ ಶರಭೋಜಿರಾವ್ ಗಾಯಕ್ವಾಡ್, ಮೊದಲಿನಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಬಿಜೆಪಿಯೊಂದಿಗೆ ಎಲ್ಲಾ ರೀತಿಯ ಹೊಂದಾಣಿಕೆ ಮಾಡಿಕೊಂಡಿದ್ದ ಶರಭೋಜಿರಾವ್, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ತಲಾ ಒಂದು ಮತ ಹಾಕಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶರಭೋಜಿರಾವ್ ಗಾಯಕ್ವಾಡ್ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಭ್ಯರ್ಥಿ ಶರಭೋಜಿರಾವ್ ಗಾಯಕ್ವಾಡ್, ಮೊದಲಿಗೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಗಮನಿಸಿ, ಉಪಾಧ್ಯಕ್ಷೆಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿಜೆಪಿಯ ಬಂಡಾಯ ಅಭ್ಯರ್ಥಿ ಸುಧಾ ಸೋಮನಾಥ ಅವರಿಗೆ ಮತ ನೀಡಿದ್ದೇನೆ. ಒಂದು ವೋಟ್ ಬಿಜೆಪಿಗೆ ಇನ್ನೊಂದನ್ನು ಕಾಂಗ್ರೆಸ್​​​ಗೆ ಹಾಕಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ನಗರಸಭೆಯಲ್ಲಿ ನಮ್ಮ ಕೆಲಸ ಆಗಬೇಕಿದೆ. ವಾರ್ಡ್​​ನಲ್ಲಿ ಅಭಿವೃದ್ಧಿ ಕೆಲಸ ಆಗಬೇಕಿರುವ ಹಿನ್ನೆಲೆ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇನೆ. ನನ್ನ ವಾರ್ಡ್​​​, ನನ್ನ ಕೆಲಸ ನನಗೆ ಮುಖ್ಯ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.