ETV Bharat / state

ಮೋದಿ ದೀರ್ಘಾಯಸ್ಸಿಗೆ ಪ್ರಾರ್ಥನೆ.. ಗಂಗಾವತಿಯಲ್ಲಿ ಮಹಿಳೆಯರಿಂದ ಮೃತ್ಯುಂಜಯ ಹೋಮ - pooja for wellness of pm modi

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀರ್ಘಾಯಸ್ಸು ಪ್ರಾಪ್ತವಾಗಲಿ ಎಂದು ಪ್ರಾರ್ಥಿಸಿ ಗಂಗಾವತಿಯ ಚನ್ನಬಸವ ಸ್ವಾಮಿ ಮಠದ ಆವರಣದಲ್ಲಿರುವ ಮಲ್ಲಿಕಾರ್ಜುನ ದೇಗುಲದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

gangavati women preform pooja for wellness of pm modi
ಪ್ರಧಾನಿ ಒಳಿತಿಗಾಗಿ ಗಂಗಾವತಿಯಲ್ಲಿ ವಿಶೇಷ ಪೂಜೆ
author img

By

Published : Jan 6, 2022, 7:28 PM IST

ಗಂಗಾವತಿ(ಕೊಪ್ಪಳ): ಬುಧವಾರ ಪಂಜಾಬ್​ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ಹಿನ್ನೆಲೆ ಅವರ ಒಳಿತಿಗಾಗಿ ನಗರದಲ್ಲಿ ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮೃತ್ಯುಂಜಯ ಹೋಮ ನಡೆಸಿದರು.

ಪ್ರಧಾನಿ ಒಳಿತಿಗಾಗಿ ಗಂಗಾವತಿಯಲ್ಲಿ ವಿಶೇಷ ಪೂಜೆ

ಪಂಜಾಬ್ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರಿಗೆ ಅಲ್ಲಿ ಎದುರಾದ ಭದ್ರತಾ ಲೋಪದಿಂದಾಗಿ ಕೆಲಕಾಲ ಕಾಯ್ದು ವಾಪಸ್ ಬಂದ ಬಳಿಕ ಈ ಘಟನೆ ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಒಂದೆಡೆ ಈ ಘಟನೆ ಕುರಿತಂತೆ ರಾಜಕೀಯ ಪಕ್ಷಗಳ ನಾಯಕರು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಗಂಗಾತಿಯ ಮಹಿಳೆಯರು ಮೋದಿ ಅವರಿಗೆ ದೀರ್ಘಾಯಸ್ಸು ಪ್ರಾಪ್ತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದೆ: ಖರ್ಗೆ

ನಗರದ ಚನ್ನಬಸವ ಸ್ವಾಮಿ ಮಠದ ಆವರಣದಲ್ಲಿರುವ ಮಲ್ಲಿಕಾರ್ಜುನ ದೇಗುಲದಲ್ಲಿ ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಿವಮ್ಮ ನೇತೃತ್ವದಲ್ಲಿ ನೂರಾರು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ, ಮೃತ್ಯುಂಜಯ ಹೋಮ ಮಾಡುವಂತೆ ಅರ್ಚಕರಿಗೆ ಮನವಿ ಮಾಡಿದರು. ನಂತರ ಮೃತ್ಯುಂಜಯ ಹೋಮ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.