ಗಂಗಾವತಿ : ಲಾಕ್ಡೌನ್ ಘೋಷಣೆಯಾದ 45 ದಿನಗಳ ಅವಧಿಯಲ್ಲಿ ಬರೋಬ್ಬರಿ 11 ಸಾವಿರ ಜನ ನಗರಕ್ಕೆ ವಲಸೆ ಬಂದಿರುವ ಅಂಶ ಇದೀಗ ಆರೋಗ್ಯ ಇಲಾಖೆ ಗಮನಕ್ಕೆ ಬಂದಿದೆ.
ಹೀಗೆ ವಲಸೆ ಬಂದ ಕಾರ್ಮಿಕರಲ್ಲಿ, ಅದರಲ್ಲೂ ಮೇ 3 ರಂದು ಸಿಎಂ ತಮ್ಮ ಸ್ವಂತ ಊರುಗಳಿಗೆ ಜನ ಮರಳಬಹುದೆಂದು ಘೋಷಣೆ ಮಾಡಿದ ಬಳಿಕ, 10 ಸಾವಿರಕ್ಕೂ ಅಧಿಕ ಜನ ಕೇವಲ ಐದು ದಿನಗಳಲ್ಲಿ ಆಗಮಿಸಿದ್ದಾರೆ. ಈ ಪೈಕಿ ತೆಲಂಗಾಣದಲ್ಲಿ ಸಿಲುಕಿದ್ದ 4, ವಿಜಯವಾಡದಲ್ಲಿ ಸಿಲುಕಿದ್ದ 9 ಜನ ಸೇರಿ ಒಟ್ಟು 11, 505 ಜನ ವಲಸೆ ಹೋದವರು ಗಂಗಾವತಿಗೆ ಮರಳಿರುವ ಅಂಶ ಬೆಳಕಿಗೆ ಬಂದಿದೆ. ಇದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.