ETV Bharat / state

ಗಂಗಾವತಿ ನಗರಸಭಾ ಸದಸ್ಯರ ಅಪಹರಣ ಪ್ರಕರಣ: ಅಂತಿಮ ಘಟ್ಟದಲ್ಲಿ ತನಿಖೆ

ಗಂಗಾವತಿ ನಗರಸಭಾ ಸದಸ್ಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಪ್ರಕರಣದ ತನಿಖೆಯ ಅಂತಿಮ ಹಂತದಲ್ಲಿದೆ ಎಂದು ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದ್ದಾರೆ.

DYSP Rudresha Ujjanakoppa
ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ
author img

By

Published : Nov 1, 2020, 8:22 AM IST

ಗಂಗಾವತಿ: ನಗರಸಭಾ ಸದಸ್ಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದ್ದು, ಈಗಾಗಲೇ ಪ್ರಕರಣದ ತನಿಖೆಯ ಅಂತಿಮ ಹಂತದಲ್ಲಿದೆ. ಗಂಗಾವತಿ ಉಪ ವಿಭಾಗದ ಅಧಿಕಾರಿಗಳು ಹಳಿಯಾಳಕ್ಕೆ ತೆರಳಿ ವಿಚಾರಣೆ ಮಾಡಿಕೊಂಡು ಬಂದಿದ್ದಾರೆ ಎಂದು ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದ್ದಾರೆ.

ಗಂಗಾವತಿ ನಗರಸಭಾ ಸದಸ್ಯರ ಅಪಹರಣ ಪ್ರಕರಣ: ಅಂತಿಮ ಹಂತದಲ್ಲಿ ತನಿಖೆ

ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣದಲ್ಲಿ ಸೂಕ್ತ ಮಾಹಿತಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ. ಇದರಲ್ಲಿ ಯಾರು ನಿಜವಾದ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ನ.2ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಯಾರೂ ಭಯ ಬೀಳುವ ಅಗತ್ಯವಿಲ್ಲ. ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಸೂಕ್ತ ರಕ್ಷಣೆ ನೀಡುತ್ತೇವೆ. ಜನರಲ್ಲಿ ಯಾವುದೇ ಭಯದ ವಾತಾವರಣ ನಿರ್ಮಾಣಕ್ಕೆ ಆಸ್ಪದ ನೀಡುವುದಿಲ್ಲ. ಭೀತಿ ಉಂಟುಮಾಡಲು ಯತ್ನಿಸುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.