ಗಂಗಾವತಿ (ಕೊಪ್ಪಳ): ಕೊರೊನಾ ಕಾರಣಕ್ಕೆ ಕಳೆದ ಹನ್ನೊಂದು ತಿಂಗಳ ಸುದೀರ್ಘ ಕಾಲದಿಂದ ಸ್ಥಗಿತವಾಗಿದ್ದ ಹುಬ್ಬಳ್ಳಿ-ಗಂಗಾವತಿ ಮಧ್ಯದ ರೈಲು ಪ್ರಯಾಣಕ್ಕೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದ್ದು, ಫೆ.6ರಿಂದ ಮತ್ತೆ ರೈಲು ಓಡಾಟ ಆರಂಭವಾಗಲಿದೆ.
ಈ ಬಗ್ಗೆ ರೈಲ್ವೆ ಇಲಾಖೆಯ ದಕ್ಷಿಣ ನೈರುತ್ಯ ವಲಯದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಆರಂಭದಲ್ಲಿ 11 ಬೋಗಿಗಳ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಓಡಿಸಲಾಗುವುದು ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಿಂದ ಫೆ.5ರಂದು ಹಾಗೂ ಗಂಗಾವತಿಯಿಂದ ಫೆ.6ರಿಂದ ಎರಡು ರೈಲುಗಳನ್ನು ಓಡಿಸಲಾಗುತ್ತಿದೆ. ಈ ಮೊದಲು ಇದ್ದ ಸಮಯ ಹಾಗೂ ವೇಳಾಪಟ್ಟಿಯಂತೆ ಓಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.