ETV Bharat / state

ಒಂದೇ ಒಂದು ಮತ ಹೊರಗಿನವರಿಗೆ ಹಾಕಬಾರದು; ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ - Etv Bharat Kannada

ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರು ಒಂದೇ ಒಂದು ಮತ ಹೊರಗಿನ ವ್ಯಕ್ತಿಗಳಿಗೆ ಹಾಕಬಾರದು ಎಂದು ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ
ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ
author img

By

Published : Apr 8, 2023, 2:03 PM IST

ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ ಭಾಷಣ

ಗಂಗಾವತಿ: ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಗಂಗಾವತಿಯನ್ನು ಹಾಗೆ ಅಭಿವೃದ್ಧಿ ಮಾಡ್ತೇನೆ, ಹೀಗೆ ಅಭಿವೃದ್ಧಿ ಮಾಡ್ತೇನೆ ಎಂದು ಹೇಳುವವರು ಬಳ್ಳಾರಿಯಲ್ಲಿ ಏನು ಮಾಡಿದ್ದಾರೆ?. ಸುಳ್ಳುಗಳಿಂದಲೇ ಜನರವನ್ನು ವಂಚಿಸಲು ಯತ್ನಿಸುತ್ತಿರುವವರನ್ನು ಈ ಚುನಾವಣೆಯಲ್ಲಿ ಜನ ಇಲ್ಲಿಂದ ಫುಟ್ಬಾಲ್ ಆಡಿದಂತೆ ಆಡಬೇಕು. ಆ ಮೂಲಕ ನೇರವಾಗಿ ಬಳ್ಳಾರಿಗೆ ಹೋಗಿ ಬೀಳಬೇಕು ಹಾಗೆ ಮತದಾನದ ಮೂಲಕ ಉತ್ತರ ನೀಡಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರೋಕ್ಷವಾಗಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ತಮ್ಮ ಗೃಹಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರನ್ನು ವಂಚಿಸುತ್ತಿರುವರಿಗೆ ದೊಡ್ಡ ಇತಿಹಾಸ ಇದೆ. ಇದನ್ನು ಜನ ತಿಳಿದುಕೊಳ್ಳಬೇಕು. ಗಂಗಾವತಿಗಿಂತಲೂ ಬಳ್ಳಾರಿ ದೊಡ್ಡದು ಮತ್ತು ಸುಂದರವಾಗಿದೆ. ಅಲ್ಲಿ ಏನು ಮಾಡಲಾಗದವರು ಇಲ್ಲಿಗೆ ಬಂದು ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.

ಫುಟ್ಬಾಲ್ ಚಿಹ್ನೆ ಪಕ್ಷಕ್ಕೆ ಸರಿಯಾಗಿಯೇ ಸಿಕ್ಕಿದೆ. ಜನ ಇಲ್ಲಿಂದ ಫುಟ್ಬಾಲ್ ಆಡಿದರೆ ಸೀದಾ ಬಳ್ಳಾರಿಗೆ ಹೋಗಿ ಬೀಳಬೇಕು. ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಒಂದೇ ಒಂದು ಮತ ಹೊರಗಿನ ವ್ಯಕ್ತಿಗಳಿಗೆ ಹಾಕಬಾರದು ಎಂದು ಅನ್ಸಾರಿ ಪರೋಕ್ಷವಾಗಿ ರೆಡ್ಡಿ ಅವರನ್ನು ಬೆಂಬಲಿಸದಂತೆ ಮನವಿ ಮಾಡಿದರು. ಚುನಾವಣೆಯ ಬಳಿಕ ಅವರು ಹೊರಟು ಹೋಗ್ತಾರೆ. ಇಲ್ಲಿ ಇರಲು ಸಾಧ್ಯವೇ ಇಲ್ಲ. ಗಂಗಾವತಿಯ ಇತಿಹಾಸ ಅವರಿಗೆ ಗೊತ್ತಿಲ್ಲ. ಇಲ್ಲಿನ ಇತಿಹಾಸ ಜನರ ನಾಡಿ ಮಿಡಿತ ಅರಿಯಲು ಅವರಿಗೆ ಐವತ್ತು ವರ್ಷ ಬೇಕು. ಯಾಕೆಂದರೆ ನಾವು ಇಲ್ಲಿದ್ದೆ 63 ವರ್ಷ ವಯಸ್ಸಾಗಿದೆ ಎಂದ ಅನ್ಸಾರಿ, ನಾನು ಎಲ್ಲಿಗೇ ಹೋದರೂ ಜನ ನನಗೆ ವೋಟ್​​ ಹಾಕ್ತೀವಿ ಎಂದು ಹೇಳುತಿದ್ದಾರೆ ಎಂದರು.

ಹೀಗೆ ಮಾತು ಮುಂದುವರಿಸಿದ ಅನ್ಸಾರಿ, ’’ಜನರ ಅಶೀರ್ವಾದ ನಮ್ಮ ಮೇಲಿದ್ದು, ನಮ್ಮ ಉದ್ದೇಶ ಇಷ್ಟೆ. ಜನರ ಕೆಲಸ ಕ್ಷೇತ್ರದ ಅಭಿವೃದ್ಧಿ. ಅನಾವಶ್ಯಕ ಭರವಸೆಗಳನ್ನ ನಾನು ನೀಡಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ದಯವಿಟ್ಟು ನನಗೆ ಆಶೀವಾರ್ದ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ‘‘ ಎಂದರು. ಯಾರು ಹೊರಗಿನ ಕ್ಷೇತ್ರದಿಂದ ಬಂದಿದ್ದಾರೋ ಅವರು ಚುನಾವಣೆ ಮುಗಿದ ದಿನ ಸಂಜೆ ಏಳು ಗಂಟೆಗೆ ಇಲ್ಲಿಂದ ಜಾಗ ಕಾಲಿ ಮಾಡುತ್ತಾರೆ. ಇಲ್ಲಿರುವ ಉದ್ದೇಶ ಅಥವಾ ಇಲ್ಲಿನ ಜನರಿಗೆ ಸೇವೆ ನೀಡುವ ಉದ್ದೇಶವೇ ಅವರಿಗಿಲ್ಲ ಎಂದು ಅನ್ಸಾರಿ ಹರಿಹಾಯ್ದರು.

ಇದನ್ನೂ ಓದಿ: ಟಿಕೆಟ್ ಸಿಕ್ಕವರಿಗೆ ಒಳ್ಳೆಯದಾಗಲಿ.. ನನ್ನ ಮುಂದಿನ ನಡೆ ಭಾನುವಾರ ನಿರ್ಧಾರ: ಮಾಜಿ ಶಾಸಕ ದತ್ತಾ

’’ಕುರುಡಾಗಿ ನಂಬಿ ಜನ ವಂಚಕರ ಮಾತಿಗೆ ಬಲಿಯಾಗಬಾರದು. ಸದಾ ನಿಮ್ಮೊಂದಿಗೆ ಯಾರು ಇಲ್ಲಿ ಇರುತ್ತಾರೋ ಅಂಥವರಿಗೆ ಅವಕಾಶ ನೀಡಿ ಗೆಲ್ಲಿಸಿದರೆ ನಿಮ್ಮ ಸೇವೆ ಮಾಡುತ್ತಾರೆ ಎಂದು ಮತದಾರರನ್ನು ಭಾವನಾತ್ಮಕವಾಗಿ ಮನವಿ ಮಾಡಿದರು. ಇದೇ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಗೊಂಡ ಕುರುಬ ಸಮಾಜದ ವಿಠಲಾಪುರ ಯಮುನಪ್ಪ ಮತ್ತು ಸಣ್ಣಕ್ಕಿ ನೀಲಪ್ಪರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸುವುದು ಶತಸಿದ್ಧ: ಹೆಚ್​ಡಿಕೆ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.