ETV Bharat / state

ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೇ ಪೌರತ್ವ ಕಾನೂನು ಜಾರಿ: ಇಕ್ಬಾಲ್ ಅನ್ಸಾರಿ - ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

ಕೇಂದ್ರ ಸರ್ಕಾರ ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಪೌರತ್ವ ಜಾರಿಗೆ ತಂದಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದರು.

Former Minister Iqbal Ansari
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
author img

By

Published : Jan 6, 2020, 4:57 PM IST

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸುದ್ದಿಗೋಷ್ಠಿ

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರು ಶಾಸಕರಾಗಿ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಬೇಕು. ಅವರು ಮಾತನಾಡಿದ್ದನ್ನು ನೋಡಿದರೆ ಅವರ ಮಾನಸಿಕ ಸ್ಥಿತಿ ಅರ್ಥವಾಗುತ್ತದೆ. ಸೋಮಶೇಖರ ರೆಡ್ಡಿ ಅಂತವರಿಂದ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡುವವರ ಮರ್ಯಾದೆ ಹೋಗ್ತಿದೆ. ಖಡ್ಗ ಹಿಡಿದೀವಿ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಬೇರೆಯವರೇನು ಬಳೆ ಹಾಕಿಕೊಂಡಿದ್ದಾರಾ? ನಮ್ಮ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅಂತ ಮಾಡಿದೀರಾ ಎಂದು ಅನ್ಸಾರಿ ಪ್ರಶ್ನಿಸಿದರು.

ಇನ್ನು ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಪೌರತ್ವ ಜಾರಿಗೆ ತಂದಿದ್ದಾರೆ. ಮೊದಲು ತ್ರಿವಳಿ ತಲಾಖ್ ಬಗ್ಗೆ ಕಾನೂನು ತಂದರು. ಗಂಡ ಜೈಲಿಗೆ ಹೋದರೆ ಅವಳು ಎಲ್ಲಿ ಹೋಗಬೇಕು.ಅನಗತ್ಯವಾಗಿ ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಜಾರಿಗೆ ತಂದಿದ್ದಾರೆ. ನನ್ನ ಪೌರತ್ವ ಕಸಿದುಕೊಳ್ಳಲು ಇವರು ಯಾರು? ನಾನು ಹುಟ್ಟಿದಾಗ ಹೆರಿಗೆಯನ್ನು ದಾದಿಗಳು ಮಾಡಿಸಿದ್ದಾರೆ. ನಾವೆಲ್ಲಿಂದ ಸರ್ಟಿಫಿಕೇಟ್ ತರೋಣ ಎಂದು ಪ್ರಶ್ನಿಸಿದರು.

ಹಾಗೆ ರಾಮಮಂದಿರ ವಿಷಯದಲ್ಲಿ ಮುಸ್ಲಿಂ ಸಮುದಾಯ ಸುಮ್ಮನಿತ್ತು. ನಮಗೆ ತ್ರಿವಳಿ ತಲಾಖ್ ಬೇಕಾಗಿರಲಿಲ್ಲ. ಮುಸ್ಲಿಂರನ್ನು ಸೆದೆಬಡೆಯಲು ಕಾನೂನು ಜಾರಿ ಮಾಡಲಾಗಿದೆ. ಇದು ಮೋದಿ ದೇಶವಲ್ಲ, ನಮ್ಮ ದೇಶ. ಮೋದಿ ದೇಶಕ್ಕಾಗಿ ಹೋರಾಟ‌ ಮಾಡಿಲ್ಲ. ನಮ್ಮ ಪೂರ್ವಜರು ಹೋರಾಟ ಮಾಡಿದ್ದಾರೆ. ಮುಸ್ಲಿಂರೇನು ಕುರಿಗಳಾ? ಎಂದು ಪ್ರಶ್ನಿಸಿದರು.

Intro:

Body:ಕೊಪ್ಪಳ:- ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದರು. ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಮುಸ್ಲಿಂರನ್ನು ಟಾರ್ಗೆಟ್ ಮಾಡಿ ತ್ರಿವಳಿ ತಲಾಖ್ ಕಾನೂನು ತಂದರು. ಗಂಡ ಜೈಲಿಗೆ ಹೋದರೆ ಅವಳು ಎಲ್ಲಿ ಹೋಗಬೇಕು. ನನ್ನ ಪೌರತ್ವ ಕಸಿದುಕೊಳ್ಳಲು ಇವರು ಯಾರು? ನನ್ನ ಹೆರಿಗೆಯನ್ನು ಸೂಲಗಿತ್ತಿ ಮಾಡಿದ್ದಾಳೆ. ನಾವೆಲ್ಲಿಂದ ಸರ್ಟಿಫಿಕೇಟ್ ತರೋಣ ಎಂದು ಪ್ರಶ್ನಿಸಿದರು. ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಜಾರಿಗೆ ತಂದಿದ್ದಾರೆ. ರಾಮಮಂದಿರ ವಿಷಯದಲ್ಲಿ ಮುಸ್ಲಿಂ ಸಮುದಾಯ ಸುಮ್ಮನಿತ್ತು. ನಮಗೆ ತ್ರಿವಳಿ ತಲಾಖ್ ಬೇಕಾಗಿರಲಿಲ್ಲ. ಮುಸ್ಲಿಂರನ್ನು ಸೆದೆಬಡೆಯಲು ಕಾನೂನು ಜಾರಿ ಮಾಡಲಾಗಿದೆ. ಇದು ಮೋದಿ ದೇಶವಲ್ಲ, ನಮ್ಮ ದೇಶ. ಮೋದಿ ದೇಶಕ್ಕಾಗಿ ಹೋರಾಟ‌ ಮಾಡಿಲ್ಲ. ನಮ್ಮ ಪೂರ್ವಜರು ಹೋರಾಟ ಮಾಡಿದ್ದಾರೆ. ಮುಸ್ಲಿಂರೇನು ಕುರಿಗಳಾ? ದನಗಳಾ ಎಂದು ಪ್ರಶ್ನೆ ಮಾಡಿದರು. ಇನ್ನು ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಮಾತನಾಡಿದ್ದನ್ನು ನೋಡಿದರೆ ಅವರ ಮನಸ್ಥಿತಿ ಅರ್ಥವಾಗುತ್ತದೆ. ಸೋಮಶೇಖರರೆಡ್ಡಿ ಅಂತವರಿಂದ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡುವವರ ಮರ್ಯಾದೆ ಹೋಗ್ತಿದೆ. ಖಡ್ಗ ಹಿಡಿದೀವಿ ಎಂದು ಸೋಮಶೇಖರರೆಡ್ಡಿ ಮಾತಾಡ್ತಾರೆ. ಬೇರೆಯವರೇನು ಬಳೆ ಹಾಕಿಕೊಂಡಿದ್ದಾರಾ? ನೀವು ಖಡ್ಗ ಹಿಡಿದುಕೊಂಡ್ರೆ,‌ ಮತ್ತೊಬ್ಬರು ಇನ್ನೊಂದನ್ನು ಹಿಡಿದುಕೊಂಡ್ರೆ ಏನ್ ಮಾಡ್ತೀರಾ? ನಮ್ಮ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅಂತ ಮಾಡಿದೀರಾ ಎಂದು ಇಕ್ಬಾಲ್ ಅನ್ಸಾರಿ ಎಂದು ಕಿಡಿಕಾರಿದರು.

ಬೈಟ್1:- ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.