ಗಂಗಾವತಿ(ಕೊಪ್ಪಳ): ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಹನುಮ ಮಾಲೆ ಧರಿಸಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ಸಿನ ಮಾಜಿ ಸಚಿವ ಶಿವರಾಜ ತಂಗಡಗಿ ಹನುಮಮಾಲೆ ಧರಿಸಿ ಸುದ್ದಿಯಾಗಿದ್ದಾರೆ. ಗಂಗಾವತಿಯ ಅಯ್ಯಪ್ಪನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳ ಅನುಗುಣವಾಗಿ ತಮ್ಮ ಬೆಂಬಲಿಗರೊಂದಿಗೆ ಶಿವರಾಜ ತಂಗಡಗಿ ಹನುಮಮಾಲೆ ಧರಿಸಿದ್ದಾರೆ.
ಮಾಜಿ ಸಚಿವ ತಂಗಡಗಿ ಈ ಬಾರಿ ಹನುಮ ಮಾಲೆಯನ್ನು ಸೋಮವಾರ ಧರಿಸುವುದಾಗಿ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದ ಬಿಜೆಪಿ ಶಾಸಕ ಬಸವರಾಜ, ಭಾನುವಾರವೇ ಹನುಮಮಾಲೆ ಹಾಕಿಕೊಂಡು ತಂಗಡಗಿಗೆ ಟಾಂಗ್ ನೀಡಿದ್ದಾರೆ.
ಅಂಜನಾದ್ರಿ ಯಲ್ಲಿ ಎ.16ರ ಹನುಮ ಜಯಂತಿಯ ಸಂದರ್ಭದಲ್ಲಿ ಹನುಮ ಮಾಲಾಧಾರಿಗಳ ಮಾಲೆ ವಿರಮಣ ಕಾರ್ಯಕ್ರಮ ನಡೆಯಲಿದೆ.
ಓದಿ : ಬಿಜೆಪಿ ದುಷ್ಟರಿಗೆ ಒಳ್ಳೆಯ ಬುದ್ಧಿಗಾಗಿ ಹನುಮ ಮಾಲೆ ಧಾರಣೆ: ಶಿವರಾಜ ತಂಗಡಗಿ