ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಹೋಬಳಿಯ ನಾನಾ ಗ್ರಾಮಗಳಲ್ಲಿನ ಬೆಟ್ಟಗಳಲ್ಲಿ ವಾಸ ಮಾಡುತ್ತಿರುವ ಚಿರತೆಗಳನ್ನು ಸೆರೆ ಹಿಡಿಯಲು ಇದೀಗ ಅರಣ್ಯ ಇಲಾಖೆ ಬೋನುಗಳ ಮೊರೆ ಹೋಗಿದೆ. ಒಟ್ಟು ಐದಕ್ಕೂ ಹೆಚ್ಚು ಬೋನುಗಳ ವ್ಯವಸ್ಥೆ ಮಾಡಿದ್ದು, ನಾನಾ ಗ್ರಾಮಗಳಲ್ಲಿ ಇರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಶಿವರಾಜ ಮೇಟಿ, ಒಂದು ವಾರದಲ್ಲಿ ಮೂರು ಚಿರತೆಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಜನರಲ್ಲಿ ಸಹಜವಾಗಿ ಭೀತಿ ಆವರಿಸಿದೆ. ಹೀಗಾಗಿ ಚಿರತೆಗಳ ಸೆರೆಗೆ ಇಲಾಖೆ ಯೋಜನೆ ರೂಪಿಸಿದೆ ಎಂದರು.
ಇತ್ತೀಚೆಗೆ ಚಿಕ್ಕರಾಂಪುರ ಹಾಗೂ ದುರ್ಗಾದೇವಿ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಜನರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಇದೀಗ ಬೋನುಗಳನ್ನು ಇಟ್ಟು ಚಿರತೆ ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.