ETV Bharat / state

ಮಾವಿನ ಮರದಲಿ ಹೂಗಳ ರಾಶಿ: ರೈತರಿಗೆ ಭರ್ಜರಿ ಇಳುವರಿ ನಿರೀಕ್ಷೆ

ಸಾಮಾನ್ಯವಾಗಿ ನವೆಂಬರ್ ಕೊನೆ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮಾವಿನ ಮರದಲ್ಲಿ ಹೂ, ಕಾಯಿ ಆಗುವುದು ವಾಡಿಕೆ. ಆದರೆ ಪ್ರಸಕ್ತ ವರ್ಷದಲ್ಲಿ ಹವಾಮಾನ ವೈಪರಿತ್ಯದ ಹಿನ್ನೆಲೆ ಕೊಂಚ ತಡವಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ಹೂವು ಸೂಜಿ ಮೊನೆಯಷ್ಟು, ಕಡಲೆ ಕಾಳಿನಷ್ಟು ಕಾಯಿಗಳು ಕಂಡು ಬರುತ್ತಿವೆ. ರೈತರಲ್ಲೀಗ ಮಾವು ಕೈ ಹಿಡಿಯುವ ವಿಶ್ವಾಸ ಮೂಡಿದೆ.

Flowers all over the mango tree at kushtagi
ಮಾವಿನ ಮರದ ತುಂಬೆಲ್ಲಾ ಹೂಗಳು; ಭರ್ಜರಿ ಇಳುವರಿ ನಿರೀಕ್ಷೆಯಲ್ಲಿ ಕೊಪ್ಪಳ ಅನ್ನದಾತರು
author img

By

Published : Feb 11, 2021, 10:24 AM IST

Updated : Feb 11, 2021, 10:32 AM IST

ಕುಷ್ಟಗಿ: ಪ್ರಸಕ್ತ ವರ್ಷದಲ್ಲಿ ಹಣ್ಣುಗಳ ರಾಜ ಮಾವಿನ ಮರಗಳಲ್ಲಿ ಕಂಡರಿಯದ ಸಮೃದ್ಧ ಹೂಗಳಿಂದ ಕಂಗೊಳಿಸುತ್ತಿದ್ದು, ಮಾವು ಬೆಳೆಗಾರರಲ್ಲಿ ಭರ್ಜರಿ ಇಳುವರಿಯ ಭರವಸೆ ಮೂಡಿಸಿದೆ.

ಕಳೆದ ವರ್ಷದಲ್ಲಿ ಮಾವು ಫಸಲಿನ ಸಂದರ್ಭದಲ್ಲಿ ಬಿರುಗಾಳಿಗೆ ಸಿಲುಕಿ ಅನ್ನದಾತರು ಸಂಕಷ್ಟಕ್ಕೀಡಾಗಿದ್ದರು. ಮಾರುಕಟ್ಟೆಯಲ್ಲಿ ಮಾವಿಗೆ ಉತ್ತಮ ಬೆಲೆ ಇದ್ದರೂ, ಫಸಲು ಇರಲಿಲ್ಲ. ಇದರ ನಡುವೆ ಕೊರೊನಾ ಲಾಕ್​​ಡೌನ್​​ನಿಂದಾಗಿ ಮಾರುಕಟ್ಟೆಗೆ ಸಾಗಿಸುವುದು ಕಷ್ಟಕರವೆನಿಸಿತ್ತು. ಆದರೆ ಈ ವರ್ಷದಲ್ಲಿ ಮಾವು ಬೆಳೆಗಾರರ ನಿರೀಕ್ಷೆಗೂ ಮೀರಿ ಮಾವಿನ ಗಿಡಗಳಲ್ಲಿ ಹೂವುಗಳು ಕಾಣಿಸಿಕೊಂಡಿವೆ.

ಮಾವಿನ ಮರದ ತುಂಬೆಲ್ಲಾ ಹೂಗಳು

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ, ಮಾವು‌ ತೋಟ ಸೇರಿದಂತೆ ರಸ್ತೆಯ ಅಂಚು ಮತ್ತು ಜಮೀನು ಬದುಗಳಲ್ಲಿರುವ ಜವಾರಿ ಮಾವಿನ ಗಿಡಗಳಲ್ಲಿ ಎಲೆ ಕಾಣಿಸದಷ್ಟು ಹೂಗಳೇ ಆವರಿಸಿವೆ.‌ ಹೂಗಳ ರಾಶಿಗೆ ಮಾವು ಬೆಳೆಗಾರರು ಮಾರು ಹೋಗಿದ್ದು, ಇವು ಉದುರದಂತೆ ಗುಣಮಟ್ಟದ ಫಸಲು ಉಳಿಸಿಕೊಳ್ಳಲು ಹಾಗೂ ಅಗತ್ಯ ಔಷಧೋಪಚಾರ ಕ್ರಮಕ್ಕೆ ಮುಂದಾಗಿದ್ದಾರೆ.

ಉತ್ತಮ ಹೂ ಬಿಟ್ಟ ಮಾವಿನ ಮರಗಳಲ್ಲಿ ಬೂದು ರೋಗ, ಅಂಗಮಾರಿ ರೋಗ ಕೂಡ ಕಾಣಿಸಿಕೊಂಡಿದೆ. ತಾಪಮಾನ ಹೆಚ್ಚಿರುವ ಹಿನ್ನೆಲೆ, ನಿಯಮಿತವಾಗಿ ನೀರುಣಿಸಬೇಕು. ಕಡಲೆ ಗಾತ್ರದ ಕಾಯಿಗಳಾಗಿದ್ದಲ್ಲಿ ವಾರದಲ್ಲಿ ಎರಡು ಬಾರಿ ಹನಿ ನೀರಾವರಿ ಮೂಲಕ ನೀರುಣಿಸಬೇಕು. ನೀರುಣಿಸುವಾಗ ಗಿಡದ ಬಡ್ಡೆಯ ಸುತ್ತಲೂ ಮಣ್ಣನ್ನು ಸಡಿಲಿಸಿ ನೀರು ನಿರ್ವಹಣೆ ಜೊತೆಗೆ ಇದೇ ಸಮಯದಲ್ಲಿ ಪೋಷಕಾಂಶಗಳ ನಿರ್ವಹಣೆ ಕಾರ್ಯವನ್ನು ಕೂಡ ಉತ್ತಮವಾಗಿ ನಿರ್ವಹಿಸಬೇಕು.‌

ಈ ಸುದ್ದಿಯನ್ನೂ ಓದಿ: ಉತ್ತರಾಖಂಡ್​​ ಹಿಮ ಸ್ಫೋಟ: ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ನೀರಿನಲ್ಲಿ ಕರಗುವ ಮಾವು ಸ್ಪೆಷಲ್, ಬೋರಾನ್ ಮತ್ತು ಪೋಟ್ಯಾಷಿಯಂ ಸಿಟ್ರೇಟ್ ಸಿಂಪಡಿಸಬೇಕು. ಸಲ್ಪರ್ ಜಿಗಿಹುಳು, ಚಿಬ್ಬುರೋಗ, ಹೂಗಳು ಕಪ್ಪಾಗಿ ಉದುರುವ ಲಕ್ಷಣಗಳಿದ್ದರೆ ಕೀಟ ನಾಶಕಗಳನ್ನು ಸಿಂಪಡಿಸಬೇಕು. ಇದಕ್ಕೆಲ್ಲಾ ಶಿಲೀಂಧ್ರನಾಶಕ ಕೀಟ ನಾಶಕಗಳನ್ನು ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್ ಮಾಹಿತಿ ನೀಡಿದರು.

Last Updated : Feb 11, 2021, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.