ETV Bharat / state

ಸಮಗ್ರ ಕೃಷಿಯಲ್ಲಿ ನಿವೃತ್ತ ಪಿಡಿಒ ಸಾಧನೆ: ಬರಡು ಭೂಮಿಯಲ್ಲಿ ನಳನಳಿಸುತ್ತಿದೆ ಬಂಗಾರದಂತ ಬೆಳೆ! - ಕೃಷಿ

ನಿವೃತ್ತಿಯಾದ ಬಳಿಕ ಸಾಕಪ್ಪ ಹಾಯಾಗಿರೋಣ ಅನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬರು ನಿವೃತ್ತಿಯ ಬಳಿಕ ಮತ್ತೆ ಕೃಷಿಯಲ್ಲಿ ತೊಡಗಿಸಿಕೊಂಡು ಸಮಗ್ರ ಕೃಷಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರ ಸಮಗ್ರ ಕೃಷಿಯನ್ನು ನೋಡಿದರೆ ಅನುಭವಿ ಕೃಷಿಕರನ್ನೂ ನಾಚಿಸುವಂತಿದೆ‌. ಅವರ ಸಮಗ್ರ ಕೃಷಿಯ ಖುಷಿ ಇತರರಿಗೆ ಪ್ರೇರಣೆಯಾಗುತ್ತಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

farming
ಸಿದ್ಧನಗೌಡ ಹಿರೇಗೌಡ್ರು
author img

By

Published : Feb 4, 2021, 7:49 AM IST

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದವರಾದ ಸಿದ್ಧನಗೌಡ ಹಿರೇಗೌಡ್ರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ‌. ನಿವೃತ್ತಿ ಬಳಿಕ ಸಿದ್ಧನಗೌಡ ಮನೆಯಲ್ಲಿ ಆರಾಮಾಗಿ ಕುಳಿತುಕೊಳ್ಳದೆ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಕೃಷಿಯಲ್ಲಿ ತೊಡಗಿರುವ ಸಿದ್ಧನಗೌಡ ಹಿರೇಗೌಡ್ರು

ಹೌದು, ಹೀಗೆ ನಿಂಬೆ, ಸುಗಂಧರಾಜ, ಗುಲಾಬಿ ಹೀಗೆ ನಾನಾ ಬೆಳೆಗಳನ್ನು ಅದ್ಭುತವಾಗಿ ಬೆಳೆದಿರುವ ಈ ತೋಟವನ್ನು ನೋಡಿದರೆ ಮನಸ್ಸಿಗೆ ಅತ್ಯಂತ ಮುದ ನೀಡುತ್ತಿದೆ. ಸುಮಾರು ಎರಡು ವರ್ಷದ ಹಿಂದೆ ಬರಡಾಗಿದ್ದ ಈ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಈಗ ಹಚ್ಚ ಹಸಿರು ನಳ ನಳಿಸುವಂತೆ ಮಾಡಿದ್ದಾರೆ ಆ ನಿವೃತ್ತ ನೌಕರ.

ಎರಡೂವರೆ ಎಕರೆ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಮುಖ್ಯ ಬೆಳೆಯಾಗಿ ಸುಮಾರು 400 ನಿಂಬು ನಾಟಿ ಮಾಡಿದ್ದಾರೆ. ಉಪಬೆಳೆಗಳಾಗಿ ಸುಗಂಧರಾಜ ಹೂ, ಗುಲಾಬಿ ಹೂ, ಅವರೇಕಾಯಿ, ಟೊಮೆಟೋ, ಹಿರೇಕಾಯಿ, ಪಾಲಕ್​ ಸೊಪ್ಪು ಸೇರಿದಂತೆ ನಾನಾ ಬೆಳೆಗಳನ್ನು ಬೆಳೆದಿದ್ದಾರೆ. ಅನುಭವಿ ಕೃಷಿಕರನ್ನೂ ನಾಚಿಸುವ ರೀತಿಯಲ್ಲಿ ಸಿದ್ಧನಗೌಡ ಅವರು ಸಮಗ್ರ ಕೃಷಿಯನ್ನು ಕೈಗೊಂಡಿದ್ದಾರೆ. ಇದರ ಜೊತೆಗೆ ಅಲ್ಲಲ್ಲಿ ಶ್ರೀಗಂಧ, ಮತ್ತಿ, ಗೋಡಂಬಿ,‌ ಹೆಬ್ಬೇವು ಸೇರಿದಂತೆ ನಾನಾ ಸಸಿಗಳನ್ನು ನಾಟಿ ಮಾಡಿದ್ದಾರೆ. ಇದರ ಜೊತೆಗೆ ಜೇನು ಸಾಕಾಣಿಯನ್ನು ಮಾಡುತ್ತಿದ್ದಾರೆ. ಸಾವಯವ ಪದ್ಧತಿಯಲ್ಲಿ ಸಮಗ್ರ ಕೃಷಿ ಕೈಗೊಂಡು ಬರಡು ನೆಲವನ್ನು ಹಚ್ಚಹಸಿರಾಗಿಸಿದ್ದಾರೆ.

ಈಗಾಗಲೇ ಸುಗಂಧ ಹೂ ಹಾಗೂ ಗುಲಾಬಿ ಯಿಂದ ಆದಾಯ ಬರುತ್ತಿದೆ. ಏನಿಲ್ಲವೆಂದರೂ ನಿತ್ಯವೂ ಸುಮಾರು 300 ರೂಪಾಯಿಗೂ ಅಧಿಕ ಆದಾಯ ಬರುತ್ತಿದೆ. ಸಾವಯವ ಪದ್ಧತಿಯ ತರಕಾರಿಯಿಂದಲೂ ಆದಾಯ ಬರುತ್ತಿದೆ. ಹೀಗಾಗಿ ಇವರಿಗೆ ಸಮಗ್ರ ಕೃಷಿಯು ಖುಷಿ ನೀಡುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡ ಮೇಲೆ ಆರೋಗ್ಯ ಮತ್ತಷ್ಟು ವೃದ್ಧಿಸಿದೆ ಎನ್ನುತ್ತಾರೆ ಸಮಗ್ರ ಕೃಷಿಕ ಸಿದ್ಧನಗೌಡರು‌.

ಸಿದ್ಧನಗೌಡ ಅವರ ಈ ಕೃಷಿಗೆ ಅವರ ಮಗ ಮಹೇಶಗೌಡ ಸಹ ಸಾಥ್ ನೀಡಿ ತಂದೆಯ ಕೃಷಿ ಕಾಯಕಕ್ಕೆ ಹೆಗಲು ಕೊಟ್ಟಿದ್ದಾರೆ‌. ಎರಡು ವರ್ಷದ ಹಿಂದೆ ಬರಡಾಗಿದ್ದ ಭೂಮಿಯಲ್ಲಿ ಈಗ ನಾನಾ ಬೆಳೆಗಳು ನಳನಳಿಸುತ್ತಿರೋದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ನೌಕರಿಯಿಂದ ನಿವೃತ್ತಿ ಬಳಿಕ ಹಲವರು ಮನೆಯಲ್ಲಿ ಹಾಯಾಗಿ ಕುಳಿತು ನಿವೃತ್ತಿ ಜೀವನ ಕಳೆಯುತ್ತಾರೆ. ಆದರೆ ಸಿದ್ಧನಗೌಡ ಅವರು ಸ್ವತಃ ಹೊಲದಲ್ಲಿ ನಿತ್ಯ ಕೆಲಸ ಮಾಡುತ್ತಾ ಇತರರಿಗೆ ಸ್ಫೂರ್ತಿಯಾಗಿರುವುದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.