ETV Bharat / state

ಮೊದಲ ಹಂತದ ಗ್ರಾ.ಪಂ. ಚುನಾವಣೆ: ಕೊಪ್ಪಳದಲ್ಲಿ ಶೇ.83.56 ಮತದಾನ

ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ಈ ಮೂರು ತಾಲೂಕುಗಳ 73 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3,85,597 ಮತದಾರರಿದ್ದು, ಈ ಪೈಕಿ 3,18, 266 ಜನ ಮತದಾರರು ಮತ ಚಲಾಯಿಸಿದ್ದಾರೆ‌. ಜಿಲ್ಲೆಯಲ್ಲಿ ಒಟ್ಟು ಶೇ.83.56 ರಷ್ಟು ಮತದಾನವಾಗಿದೆ.

author img

By

Published : Dec 23, 2020, 2:37 PM IST

ಕೊಪ್ಪಳದಲ್ಲಿ ಶೇ.83.56 ರಷ್ಟು ಮತದಾನ
ಮೊದಲ ಹಂತದ ಗ್ರಾ.ಪಂ. ಚುನಾವಣೆ

ಕೊಪ್ಪಳ: ಜಿಲ್ಲೆಯ ಮೂರು ತಾಲೂಕುಗಳ 73 ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು 3,18, 266 ಮತದಾರರು ಮತ ಚಲಾಯಿಸಿದ್ದಾರೆ.

ಕೊಪ್ಪಳದಲ್ಲಿ ಶೇ.83.56 ರಷ್ಟು ಮತದಾನ

ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ಈ ಮೂರು ತಾಲೂಕುಗಳ 73 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3,85,597 ಮತದಾರರಿದ್ದು, ಈ ಪೈಕಿ 3,18, 266 ಜನ ಮತದಾರರು ಮತ ಚಲಾಯಿಸಿದ್ದಾರೆ‌. ಈ ಪೈಕಿ 1,63,160 ಜನ ಪುರುಷರು ಹಾಗೂ 1,55,106 ಜನ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಓದಿ: ಕೊಪ್ಪಳ ಜಿಲ್ಲೆಯಲ್ಲಿ 1,210 ಗ್ರಾಮ ಪಂಚಾಯತ್‌ ಸ್ಥಾನಗಳಿಗೆ ವೋಟಿಂಗ್​

ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯಿತಿಗಳ 318 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಒಟ್ಟು 2,16,304 ಮತದಾರರ ಪೈಕಿ 1,80,736 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಯಲಬುರ್ಗಾ ತಾಲೂಕಿನ 20 ಗ್ರಾಮ ಪಂಚಾಯಿತಿಯ 143 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಒಟ್ಟು 97,486 ಮತದಾರರಲ್ಲಿ 79,356 ಮತದಾನ ಮಾಡಿದ್ದಾರೆ. ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗೆ 103 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಒಟ್ಟು 72,807 ಮತದಾರರ ಪೈಕಿ 58,165 ಜನರು ಮತದಾನ ಮಾಡಿದ್ದಾರೆ‌. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನಿನ್ನೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.83.56 ರಷ್ಟು ಮತದಾನವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.