ETV Bharat / state

ಮರಳು ಮಾಫಿಯಾ ವಿರುದ್ಧ ದೂರು ನೀಡಿದ್ದಕ್ಕೆ ಗುಡಿಸಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು - ಕೊಪ್ಪಳದ ಗುಡಿಸಲಿಗೆ ಬೆಂಕಿ

ಮರಳು ದಂಧೆ ನಡೆಸುತ್ತಿದ್ದವರ ವಿರುದ್ಧ ದೂರು ನೀಡಿದ್ದಕ್ಕೆ ದುಷ್ಕರ್ಮಿಗಳು ದೂರು ನೀಡಿದವರ ಗುಡಿಸಲಿಗೆ ಬೆಂಕಿ ಹಚ್ಚಿರುವ ಪ್ರಕರಣ ಬೆಳಕಿಗೆ ಬಂದಿದೆ.

hut
ಗುಡಿಸಲಿಗೆ ಬೆಂಕಿ
author img

By

Published : Mar 17, 2020, 12:01 PM IST

Updated : Mar 17, 2020, 1:52 PM IST

ಕೊಪ್ಪಳ: ಮರಳು ಮಾಫಿಯಾ ವಿರುದ್ಧ ದೂರು ನೀಡಿದ್ದಕ್ಕೆ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಂಗನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಗುಡಿಸಲಿಗೆ ಬೆಂಕಿ

ಹುಲುಗಪ್ಪ ಎಂಬುವವರ ಗುಡಿಸಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಗಂಗನಾಳ ಹೊರವಲಯದಲ್ಲಿ ಯಂಕಪ್ಪ ಗೋಡಿನಾಳ ಎಂಬಾತ ಅಕ್ರಮ ಮರಳು ದಂಧೆ‌ ನಡೆಸುತ್ತಿದ್ದ. ಈ ಕುರಿತಂತೆ ಯಂಕಪ್ಪನ ವಿರುದ್ಧ ಹುಲುಗಪ್ಪ ಪೊಲೀಸರಿಗೆ ದೂರು ನೀಡಿದ್ದ. ಇದರಿಂದಾಗಿ ಹುಲುಗಪ್ಪನ ಗುಡಿಸಲಿಗೆ ಯಂಕಪ್ಪ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಹುಲುಗಪ್ಪ ವಾಸ ಮಾಡುತ್ತಿದ್ದ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಗುಡಿಸಲಿನಲ್ಲಿದ್ದ ದವಸಧಾನ್ಯ ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌‌ನೆ ಈ ಘಟನೆ ನಡೆದಿದೆ.

Last Updated : Mar 17, 2020, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.