ಗಂಗಾವತಿ:ಕೊರೊನಾದ ಜೀವರಕ್ಷಕ ಔಷಧಿ ಎನ್ನಲಾಗುವ ರೆಮ್ಡಿಸಿವಿರ್ ಲಸಿಕೆಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಆರು ಜನ ಆರೋಪಿಗಳ ಮೇಲೆ ದೂರು ದಾಖಲಾಗಿದೆ.
ನಗರದ ನಾನಾ ಪ್ರತಿಷ್ಠಿತ ವೈದ್ಯರಿಗೆ ಸೇರಿದ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದ ಹಾಗೂ ಮೆಡಿಕಲ್ ಕ್ಷೇತ್ರದ ಹಿನ್ನೆಲೆ ಹೊಂದಿರುವ ಆರೋಪಿಗಳ ಮೇಲೆ ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ಅಪರಾಧ ಕಾನೂನಿನಡಿ ಪೊಲೀಸರು ದೂರು ದಾಖಲಿಸಿದ್ದಾರೆ.
13 ರೆಮ್ಡಿಸಿವಿರ್ ಬಾಟಲಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಪವನ್ ವಟಕುಟಿ ಕೊಟ್ಟೂರೇಶ್ವರ, ರಾಧಾಕೃಷ್ಣ ಹರಿಸೀಲಂ, ಅಭಿಷೇಕ ಶಿವಪ್ಪ, ಮಣಿಕಂಠ ಸಿದ್ದಪ್ಪ, ಶಂಕರ್ ದುರುಗಪ್ಪ ಹಾಗೂ ಅಕ್ಷಯ್ ಮಲ್ಲಿಕಾರ್ಜುನ ಕೋರಿಶೆಟ್ಟರ್ ಎಂಬ ಆರೋಪಿಗಳ ಮೇಲೆ ದೂರು ದಾಖಲಿಸಿದ್ದಾರೆ.