ಕುಷ್ಟಗಿ(ಕೊಪ್ಪಳ) : ಇಲ್ಲಿನ ಸಂತೆ ಮಾರುಕಟ್ಟೆಗೆ ಬಂದು ಹೋಗುವ ರೈತರಿಗೆ ಪ್ರತಿ ದಿನವೂ ಸಂಕಷ್ಟದ ದಿನಗಳಾಗುತ್ತಿವೆ. ಒಂದೆಡೆ ಕೊರೊನಾ ಭೀತಿ ಇನ್ನೊಂದೆಡೆ ಜೀವನ ನಡೆಸೋದು ಹೇಗೆ ಎಂಬ ಚಿಂತೆ .
ದಿನವೂ ಬೆಳಗಿನ ಜಾವ 3 ಗಂಟೆ ವೇಳೆಗೆ ಕಾಯಿಪಲ್ಲೆ, ಸೊಪ್ಪು ಗಂಟಿನೊಂದಿಗೆ ಬರುವ ರೈತರು, ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನು ಬದನೆ, ಟೊಮೆಟೊ ಬೆಳೆದವರ ಪಾಡಂತೂ ಹೇಳತೀರದು. ಕೆಲವು ತರಕಾರಿಗಳನ್ನು ಯಾರೂ ಕೊಂಡುಕೊಳ್ಳದ ಹಿನ್ನೆಲೆ ರೈತರು ಅಲ್ಲೇ ಸುರಿದು ವಾಪಸ್ ಮನೆಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಇಲ್ಲಿನ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕಿದೆ.