ETV Bharat / state

ರೈತರ ಮನವಿಗೆ ಸ್ಪಂದಿಸಿ ಎರಡನೇ ಶನಿವಾರವೂ ಬಿತ್ತನೆ ಬೀಜ ಪೂರೈಸಿದ ರೈತ ಸಂಪರ್ಕ ಕೇಂದ್ರ - ರೈತ ಸಂಪರ್ಕ ಕೇಂದ್ರ ಸುದ್ಧಿ

ತಾಂತ್ರಿಕ ಸಹಾಯಕ ನಾಗನಗೌಡ ಪಾಟೀಲ ಮಾತನಾಡಿ, ರೈತರಿಗೆ ಎರಡನೇ ಶನಿವಾರ ಎಂಬುದು ಗೊತ್ತಿಲ್ಲದೇ ಬಂದಿದ್ದಾರೆ. ಅವರಿಗೆ ನಿರಾಶೆಯಾಗದಂತೆ ಬಿತ್ತನೆ ಬೀಜ ಪೂರೈಸಲು ಕ್ರಮ ಕೈಗೊಂಡಿದ್ದೇವೆ. ರವಿವಾರ ರಜೆ ದಿನವಾಗಿರುವ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬಿತ್ತನೆ ಬೀಜದ ದಾಸ್ತಾನು ಗಮನಿಸಿ ಪೂರೈಸಲಾಗುವುದು ಎಂದರು.

farmer-contact-center-
ರೈತ ಸಂಪರ್ಕ ಕೇಂದ್ರ
author img

By

Published : Oct 10, 2020, 7:50 PM IST

ಕುಷ್ಟಗಿ (ಕೊಪ್ಪಳ): ಎರಡನೇ ಶನಿವಾರ ಸರ್ಕಾರಿ ರಜೆ ದಿನವಾಗಿದ್ದರೂ, ಇಲ್ಲಿನ ರೈತ ಸಂಪರ್ಕ ಕೇಂದ್ರ ರೈತರ ಒತ್ತಾಯಕ್ಕೆ ಮಣಿದು ಬಿತ್ತನೆ ಬೀಜ ಪೂರೈಕೆ ಮಾಡಿದೆ.

ರೈತರಿಗೆ ಎರಡನೇ ಶನಿವಾರ ಸರ್ಕಾರಿ ರಜೆ ಎಂಬ ಅರಿವಿಲ್ಲದೇ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದರು. ಆ ವೇಳೆ ರಜೆ ಇರುವುದು ಗೊತ್ತಾಗಿ ಮಾರನೆ ದಿನ ರಜೆ ಇರುವುದರಿಂದ ಸೋಮವಾರ ಪುನಃ ಬರಬೇಕೆಂಬ ಚಿಂತೆಯಲ್ಲಿದ್ದರು. ಈ ವೇಳೆ ಕೆಲ ರೈತರು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್, ತಾಂತ್ರಿಕ ಸಹಾಯಕ ನಾಗನಗೌಡ ಪಾಟೀಲ ಅವರನ್ನು ಸಂಪರ್ಕಿಸಿ ನಿಜ ಸ್ಥಿತಿ ವಿವರಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಬಿತ್ತನೆ ಬೀಜ ವಿತರಣೆಗೆ ಮುಂದಾದರು.

ಬಿತ್ತನೆ ಬೀಜ ಪೂರೈಸಿದ ರೈತ ಸಂಪರ್ಕ ಕೇಂದ್ರ

ತಾಂತ್ರಿಕ ಸಹಾಯಕ ನಾಗನಗೌಡ ಪಾಟೀಲ ಮಾತನಾಡಿ, ರೈತರಿಗೆ ಎರಡನೇ ಶನಿವಾರ ಎಂಬುದು ಗೊತ್ತಿಲ್ಲದೇ ಬಂದಿದ್ದಾರೆ. ಅವರಿಗೆ ನಿರಾಶೆಯಾಗದಂತೆ ಬಿತ್ತನೆ ಬೀಜ ಪೂರೈಸಲು ಕ್ರಮ ಕೈಗೊಂಡಿದ್ದೇವೆ. ರವಿವಾರ ರಜೆ ದಿನವಾಗಿರುವ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬಿತ್ತನೆ ಬೀಜದ ದಾಸ್ತಾನು ಗಮನಿಸಿ ಪೂರೈಸಲಾಗುವುದು ಎಂದರು.

ಹಿಂಗಾರು ಹಂಗಾಮಿನ ಉತ್ತಮ ಮಳೆಯಿಂದ ಸದ್ಯ ಬಿತ್ತನೆಗೆ ಸಕಾಲಿಕವಾಗಿದೆ. ಬಿಳಿ ಜೋಳ, ಕಡಲೆ ಬಿತ್ತನೆಗೆ ಹಾಗೂ ತೊಗರಿ ಬೆಳೆಗೆ ಔಷಧಿ ಸಿಂಪಡಣೆಗೆ ಬೇಡಿಕೆ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.