ಗಂಗಾವತಿ (ಕೊಪ್ಪಳ) : ಕೊಪ್ಪಳ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಬೆಡ್ಗಳು ಭರ್ತಿಯಾಗಿವೆ. ಹೀಗಾಗಿ ಗಂಗಾವತಿ ಪಟ್ಟಣದಲ್ಲಿ ನೂತನ ಕೋವಿಡ್ ಆಸ್ಪತ್ರೆ ತೆರೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿದ್ದ 160 ಬೆಡ್ಗಳು ಭರ್ತಿಯಾಗಿವೆ. ಎಂಜಿನಿಯರಿಂಗ್ ಕಾಲೇಜಿನಲ್ಲಿ 400 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿತ್ತು. ಆದರೀಗ ಅದು ಕೂಡ ಭರ್ತಿಯಾಗುವುದರಲ್ಲಿದೆ. ಈ ಹಿನ್ನೆಲೆ ಗಂಗಾವತಿಯ 100 ಹಾಸಿಗೆಗಳ ಉಪವಿಭಾಗ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸುವ ಉದ್ದೇಶವನ್ನ ಜಿಲ್ಲಾಡಳಿತ ಹೊಂದಿದೆ.
ಗಂಗಾವತಿ ತಾಲೂಕಿನಲ್ಲೇ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಉಪವಿಭಾಗ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡುವ ಚಿಂತನೆ ನಡೆಸಲಾಗಿದೆ.