ಕೊಪ್ಪಳ: ಕೊರೊನಾ ಸೋಂಕಿನಿಂದ ನಿನ್ನೆ (ಆ.28) ಮೃತಪಟ್ಟ ನಗರದ ಬಿಜೆಪಿ ಯುವ ಮುಖಂಡ ಹಾಲೇಶ್ ಕಂದಾರಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಕಲ್ಯಾಣ ಮಂಟಪದಲ್ಲಿ ಅವರ ಆಪ್ತರು ಪಕ್ಷಾತೀತವಾಗಿ ಶ್ರದ್ಧಾಂಜಲಿ ಸಭೆ ನಡೆಸಿ, ಅಗಲಿದ ಯುವ ನಾಯಕನ ಆತ್ಮಕ್ಕೆ ಶಾಂತಿ ಸಿಗುವಂತೆ ಪೂಜೆ ಸಲ್ಲಿಸಿದರು.
ಹೋರಾಟದ ಮನೋಭಾವನೆಯಿಂದಲೇ ಹಾಲೇಶ್ ಕಂದಾರಿ ಅವರು ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವ್ಯಕ್ತಿತ್ವ ಎಂದು ಆಪ್ತ ವಲಯ ಸ್ಮರಿಸಿದರು.