ETV Bharat / state

ಮಗಳು ಸತ್ತ ವಿಷಯ ಮುಚ್ಚಿಟ್ಟು ದುಡಿಸಿಕೊಂಡ ಅಧಿಕಾರಿಗಳು, ಸಾಯುವ ಮುನ್ನ ಮಗಳ ಮುಖ ನೋಡದ ತಂದೆ - ಮಗಳು ಮೃತಪಟ್ಟ ಸುದ್ದಿ

ಮಗಳು ಮೃತಪಟ್ಟ ಸುದ್ದಿಯನ್ನೇ ಮುಚ್ಚಿಟ್ಟ ಅಧಿಕಾರಿ ವರ್ಗ, ಬಸ್​ ನಿರ್ವಾಹಕರೊಬ್ಬರನ್ನು ಕೆಲಸಕ್ಕೆ ಕಳುಹಿಸಿದ ಅಮಾನವೀಯ ಘಟನೆಯೊಂದು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದಲ್ಲಿ ನಡೆದಿದೆ.

ಮಂಜುನಾಥ್
author img

By

Published : Sep 6, 2019, 2:00 PM IST

Updated : Sep 6, 2019, 9:26 PM IST

ಕೊಪ್ಪಳ: ಜಿಲ್ಲೆಯ ಗಂಗಾವತಿ ಡಿಪೋಗೆ ಸೇರಿದ ಕೊಲ್ಲಾಪುರ ಬಸ್​ನ ನಿರ್ವಾಹಕ ಮಂಜುನಾಥ ಅವರ ಮಗಳು ತೀರಿಹೋದರೂ, ಆ ವಿಷಯವನ್ನು ಡಿಪೋದ ಅಧಿಕಾರಿಗಳು ಮಂಜುನಾಥ ಅವರಿಗೆ ತಿಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಜಿಲ್ಲೆಯವರಾದ ಮಂಜುನಾಥ್ ಅವರ ಕುಟುಂಬ, ತಾಲೂಕಿನ ರಾಂಪೂರದಲ್ಲಿ ವಾಸವಾಗಿದೆ. ಇವರ ಮಗಳು ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಸಾವನ್ನಪಿದ್ದಾಳೆ. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್​ಗೆ ತಿಳಿಸಲು ಗಂಗಾವತಿ ಬಸ್ ಡಿಪೋಗೆ ಕುಟುಂಬದವರು ಫೋನ್ ಮಾಡಿ ತಿಳಿಸಿದ್ದಾರಂತೆ. ಆದರೆ, ಅಲ್ಲಿನ ಅಧಿಕಾರಿಗಳು ಮಂಜುನಾಥ್​ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೆ ಕೆಲಸಕ್ಕೆ ಕಳುಹಿಸಿದ್ದಾರೆ.

ಸಾಯುವ ಮುನ್ನ ಮಗಳ ಮುಖ ನೋಡದ ನತದೃಷ್ಟ ತಂದೆ

ಮಂಜುನಾಥ್ ಕೆಲಸಕ್ಕೆ ಹೋಗಿ ನಿನ್ನೆ ರಾತ್ರಿ ಡಿಪೋಗೆ ವಾಪಾಸ್ ಬಂದಾಗ ವಿಷಯ ತಿಳಿದಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಳಗಾಗಿದ್ದಾರೆ. ಕೂಡಲೇ ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿ, ರಜೆ ಕೇಳಿದರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಯ ಬಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ಕೊಡುತ್ತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಕಂಡಕ್ಟರ್ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಈ ನಡುವೆ, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗಂಗಾವತಿ ಡಿಪೋ ಮ್ಯಾನೇಜರ್​, ಮನೆಯವರು ಫೋನ್​ ಮಾಡಿದಾಗ ಯಾರು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಸಂಜೆವರೆಗೂ ನಾನು ಡಿಪೋದಲ್ಲಿ ಇದ್ದೇನೆ ಯಾರಿಗೆ ಫೋನ್​ ಹಚ್ಚಿದ್ದಾರೆ ಅಂತಾ ಗೊತ್ತಿಲ್ಲ ಎಂದು ನುಣಿಚಿಕೊಳ್ಳುವ ಯತ್ನವನ್ನೂ ಮಾಡಿದ್ದಾರೆ.

Intro:Body:ಕೊಪ್ಪಳ:- ಮಗಳು ಮೃತಪಟ್ಟ ಸುದ್ದಿಯನ್ನೆ ಮುಚ್ಚಿಟ್ಟು ಕೆಲಸಕ್ಕೆ ಕಳುಹಿಸಿದ ಘಟನೆಯೊಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದಲ್ಲಿ ನಡೆದಿದೆ. ಈ ಮೂಲಕ ಬಸ್ ಡಿಪೋದ ಅಧಿಕಾರಿಗಳು ಅಮಾನವಿಯತೆ ತೋರಿರುವ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಗಂಗಾವತಿ ಡಿಪೋಗೆ ಸೇರಿದ ಕೊಲ್ಲಾಪುರ ಬಸ್ ನ ನಿರ್ವಾಹಕ ಮಂಜುನಾಥ ಅವರ ಮಗಳು ತೀರಿಹೋದರೂ ಆ ವಿಷಯವನ್ನು ಡಿಪೋದ ಅಧಿಕಾರಿಗಳು ಮಂಜುನಾಥ ಅವರಿಗೆ ತಿಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಾಗಲಕೋಟ ಜಿಲ್ಲೆಯವರಾದ ಮಂಜುನಾಥ ಅವರ ಕುಟುಂಬ ಬಾಗಲಕೋಟೆ ತಾಲೂಕಿನ ರಾಂಪೂರದಲ್ಲಿ ವಾಸವಾಗಿದೆ. ಅವರ ಮಗಳು ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ ೧೦ ಗಂಟೆ ಸುಮಾರಿಗೆ ಸಾವನ್ನಪಿದ್ದಾಳೆ. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್ ಗೆ ತಿಳಿಸಲು ಗಂಗಾವತಿ ಬಸ್ ಡಿಪೋ ಗೆ ಕುಟುಂಬದವರು ಫೋನ್ ಮಾಡಿ ತಿಳಿಸಿದ್ದಾರಂತೆ. ಆದರೆ, ಅಲ್ಲಿನ ಅಧಿಕಾರಿಗಳು ಮಂಜುನಾಥ್ ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೆ ಕೆಲಸಕ್ಕೆ ಕಳುಹಿಸಿದ್ದಾರೆ. ಮಂಜುನಾಥ್ ಕೆಲಸಕ್ಕೆ ಹೋಗಿ ನಿನ್ನೆ ರಾತ್ರಿ ಡಿಪೋ ಗೆ ವಾಪಾಸ್ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಳಗಾಗಿದ್ದಾರೆ. ಕೂಡಲೇ ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿ ರಜೆ ಕೇಳಿದರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಯ ಬಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ಕೊಡುತ್ತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಕಂಡಕ್ಟರ್ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಬೈಟ್01:- ಮಂಜುನಾಥ್, ನಿರ್ವಾಹಕ.Conclusion:
Last Updated : Sep 6, 2019, 9:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.