ETV Bharat / state

ಚಹಾ ಅಂಗಡಿಯಲ್ಲಿ ಸಿಲಿಂಡರ್​ ಸ್ಫೋಟ: ವಿಡಿಯೋ ವೈರಲ್​ - Cylinder explosion in tea shop

ಚಹಾದ ಅಂಗಡಿಯೊಂದರಲ್ಲಿ ಸಿಲಿಂಡರ್​ ಸ್ಫೋಟಗೊಂಡಿರುವ ಘಟನೆ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.

cylinder-explosion-in-tea-shop-in-bennur-village
ಚಹಾದ ಅಂಗಡಿಯಲ್ಲಿ ಸಿಲಿಂಡರ್​ ಸ್ಫೋಟ:ವಿಡಿಯೋ ವೈರಲ್​
author img

By

Published : Mar 27, 2023, 8:08 PM IST

ಚಹಾದ ಅಂಗಡಿಯಲ್ಲಿ ಸಿಲಿಂಡರ್​ ಸ್ಫೋಟ

ಗಂಗಾವತಿ(ಕೊಪ್ಪಳ): ಚಹಾದ ಅಂಗಡಿಯೊಂದರಲ್ಲಿ ಸಿಲಿಂಡರ್​ ಸ್ಫೋಟಗೊಂಡಿರುವ ಭಯನಾಕ ಘಟನೆ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಇಂದು ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಘಟನೆಯಲ್ಲಿ ಚಹಾದ ಅಂಗಡಿಯಲ್ಲಿನ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆನ್ನೂರು ಗ್ರಾಮದ ದೊಡ್ಡ ಯಮನೂರಪ್ಪ ಕೋಟೆಪ್ಪ ಎಂಬ ವ್ಯಕ್ತಿಗೆ ಸೇರಿದ ಚಹಾದ ಅಂಗಡಿ ಇದಾಗಿದೆ. ಎಂದಿನಂತೆ ಚಹಾ ಮಾಡುತ್ತಿರುವಾಗ ಸಿಲಿಂಡರ್​ನಲ್ಲಿ ಬೆಂಕಿ ಕಾಣಿಸಿಕೊಂಡಿಸಿದೆ. ಬೆಂಕಿ ನಂದಿಸಲು ಯತ್ನಿಸಿದರು ಸಿಲಿಂಡರ್​ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿಯ ಜ್ವಾಲೆ ಮತ್ತಷ್ಟು ವ್ಯಾಪಿಸಿದೆ. ಕೂಡಲೇ ಹೋಟೆಲ್​ನಲ್ಲಿದ್ದ ಜನ ಅಂಗಡಿಯಿಂದ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸಿಲಿಂಡರ್ ಸ್ಫೋಟದ ಶಬ್ದದಿಂದ ಕೆಲಕಾಲ ಗ್ರಾಮಸ್ಥರಲ್ಲಿ ಆತಂಕ ನಿರ್ಮಾಣವಾಗಿತ್ತು.

ಸಿಲಿಂಡರ್ ಸ್ಫೋಟದ ಬಳಿಕ ಗ್ಯಾಸ್​ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜನ ನೀರು ಎರಚಿ ಬೆಂಕಿ ನಂದಿಸಿದ್ದಾರೆ. ಆದರೆ ಈ ಹೊತ್ತಿಗಾಗಲೇ ಅಂಗಡಿಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಕಾಣಿಸಿಕೊಂಡ ಬೆಂಕಿ.. ಸಿರುಗುಪ್ಪ ಬಳಿ ಹೊತ್ತಿ ಉರಿದ ಶಾಲಾ ಬಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.