ETV Bharat / state

ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ: ಕೃಷಿ ಅಧಿಕಾರಿಗಳಿಂದ ಪ್ರಾತ್ಯಕ್ಷಿಕೆ - Crop Survey App

ಬೆಳೆ ಸಮೀಕ್ಷೆಯ ಕುರಿತು ಕೊಪ್ಪಳ ತಾಲೂಕಿನ ಕುಷ್ಟಗಿ ಹೋಬಳಿಯಲ್ಲಿ ರೈತ ಅಮರೇಶ ಕಲಕಬಂಡಿ ಎಂಬುವರ ಮೆಕ್ಕೆಜೋಳದ ಹೊಲದಲ್ಲಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಮೊಬೈಲ್ ಆ್ಯಪ್ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.

Kushtagi
ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ: ಕೃಷಿ ಅಧಿಕಾರಿಗಳಿಂದ ಪ್ರಾತ್ಯಕ್ಷಿತೆ
author img

By

Published : Aug 20, 2020, 8:14 AM IST

ಕುಷ್ಟಗಿ (ಕೊಪ್ಪಳ): ರೈತರು ತಾವು ಬೆಳೆದ ಬೆಳೆ ಮಾಹಿತಿ ವಿವರ ದಾಖಲಿಸಲು ಮೊಬೈಲ್ ಆ್ಯಪ್ ಮೂಲಕ ಮಾಡಬೇಕಾದ ಬೆಳೆ ಸಮೀಕ್ಷೆಯ ಕುರಿತು ಕೃಷಿ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಅಲ್ಲದೆ ಸಮೀಕ್ಷೆಯ ಬಗ್ಗೆ ರೈತರಿಗೆ ಖುದ್ದಾಗಿ ಪ್ರಾತ್ಯಕ್ಷಿಕೆ ತೋರಿಸಿದರು.

ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ: ಕೃಷಿ ಅಧಿಕಾರಿಗಳಿಂದ ಪ್ರಾತ್ಯಕ್ಷಿಕೆ

ತಾಲೂಕಿನ ಕುಷ್ಟಗಿ ಹೋಬಳಿಯಲ್ಲಿ ರೈತ ಅಮರೇಶ ಕಲಕಬಂಡಿ ಎಂಬುವರ ಮೆಕ್ಕೆಜೋಳದ ಹೊಲದಲ್ಲಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಮೊಬೈಲ್ ಆ್ಯಪ್ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಇನ್ಮುಂದೆ ರೈತರು ತಾವು ಬೆಳೆದಿರುವ ಬೆಳೆಯನ್ನು ತಾವೇ ಸಮೀಕ್ಷೆ ಮಾಡುವುದರಿಂದ ಆಗುವ ಪ್ರಯೋಜನೆಗಳ ಕುರಿತು ಅಲ್ಲಿದ್ದ ರೈತರಿಗೆ ಮಾಹಿತಿ ನೀಡಿದರು.

ಸರ್ಕಾರದ ನಿರ್ದೇಶದನ್ವಯ ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಬೇಕು. ರೈತರೇ ಸಮೀಕ್ಷೆ ಮಾಡುವುದರಿಂದ ಯಾವ ಬೆಳೆಯ ವಿವರಗಳೂ ಸಮೀಕ್ಷೆಯಿಂದ ಬಿಟ್ಟು ಹೋಗುವುದಿಲ್ಲ. ಬೆಳೆ ಸಮೀಕ್ಷೆಯ ಬಗ್ಗೆ ರೈತರು ದೂರು ನೀಡುವುದು ತಪ್ಪಿದಂತಾಗುತ್ತದೆ. ರೈತರು ಸ್ಮಾರ್ಟ್ ಫೋನ್ ಮೂಲಕ ಗೂಗಲ್ ಸ್ಟೋರ್​​ನಲ್ಲಿ ಬೆಳೆ ಸಮೀಕ್ಷೆ ಆ್ಯಪ್( Former crops survey app) ಡೌನ್​​ಲೋಡ್ ಮಾಡಿ ತಮ್ಮ ಹೆಸರಿನಲ್ಲಿರುವ ಒಟ್ಟು ಜಮೀನು, ಬೆಳೆಯಲಾದ ಬೆಳೆ ಫೋಟೋ ಸಹಿತ ಅಪ್​​ಲೋಡ್ ಮಾಡಬಹುದಾಗಿದೆ. ಇದರಿಂದಾಗಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪ ತಪ್ಪಿ ರೈತರೇ ಸ್ವಯಂ ದೃಢೀಕರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಈ ಮಾಹಿತಿ ದಾಖಲಿಸದೆ ಇದ್ದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ವಿಮಾ ಪರಿಹಾರದಿಂದ ವಂಚಿತರಾಗುವ ಸಾಧ್ಯತೆಗಳಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.