ETV Bharat / state

ಅನೈತಿಕ ಸಂಬಂಧಕ್ಕೆ ವ್ಯಕ್ತಿ ಕೊಲೆ, ಆರೋಪಿ ಬಂಧನ - ಕಾರಟಗಿ ತಾಲೂಕಿನ ನಾಗನಕಲ್‌

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್‌ ಬಳಿ ಅನೈತಿಕ ಸಂಬಂಧದ ಕಾರಣ ವ್ಯಕ್ತಿಯೊಬ್ಬರ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ

author img

By

Published : Aug 3, 2023, 3:57 PM IST

Updated : Aug 3, 2023, 4:10 PM IST

ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್‌ ಬಳಿ ಜುಲೈ 31ರಂದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಕಾರಟಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾರಟಗಿ ತಾಲೂಕಿನ ಗುಡೂರು ಗ್ರಾಮದ ಗೌಡಪ್ಪ ಅಲಿಯಾಸ್‌ ಗರುಡಪ್ಪ (22) ಎಂದು ಗುರುತಿಸಲಾಗಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣ: ಜುಲೈ 31ರಂದು ರಾತ್ರಿ ಸುಮಾರು 10:40 ರ ವೇಳೆಗೆ ಕಾರಟಗಿ ತಾಲೂಕಿನ ನಾಗನಕಲ್‌ ಬಳಿ ಕಾರಟಗಿಯ ನಜೀರಸಾಬ ಕಾಲೋನಿ ನಿವಾಸಿ ರಾಘವೇಂದ್ರರೆಡ್ಡಿ (36) ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಕುರಿತಂತೆ ರಾಘವೇಂದ್ರರೆಡ್ಡಿ ತಾಯಿ ಕಾರಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ಕುರಿತಂತೆ ತನಿಖೆ ನಡೆಸಿದ ಕಾರಟಗಿ ಪೊಲೀಸರು ಗುಡೂರು ಗ್ರಾಮದ ಗೌಡಪ್ಪ ಅಲಿಯಾಸ್‌ ಗರುಡಪ್ಪ ಎಂಬ ಯುವಕನನ್ನು ಬಂಧಿಸಿದ್ದಾರೆ.

ಮೃತ ರಾಘವೇಂದ್ರರೆಡ್ಡಿ ಗೌಡಪ್ಪನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ರಾತ್ರಿ ವೇಳೆ ರಾಘವೇಂದ್ರರೆಡ್ಡಿಯನ್ನು ನಾಗನಕಲ್‌ಬಳಿ ಕಟ್ಟಿಗೆಯಿಂದ ಹೊಡೆದು ಗೌಡಪ್ಪ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಇದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ವಿಚಾರಣೆ ನೆಪದಲ್ಲಿ ಕೈಗೆ ಕೋಳ: ಕನಕಗಿರಿ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನೆಪದಲ್ಲಿ ಯುವಕನನ್ನ ಬಂಧಿಸಿ ಕೈಗೆ ಕೋಳ ಹಾಕಿರುವ ಘಟನೆ ಬುಧವಾರ ಜರುಗಿದ್ದು, ಕನಕಗಿರಿ ತಾಲೂಕಿನ ಬೊಮ್ಮಸಾಗರ ತಾಂಡಾದ ಸಣ್ಣ ಹನುಮಂತಪ್ಪ ಕೂಡಿ ಎಂಬಾತನ ಕೈಗೆ ಕೋಳ ಹಾಕಿದ ಪೊಟೋ ವೈರಲ್ ಆದ ಹಿನ್ನೆಲೆ ಪೊಲೀಸರ ಈ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತಂತೆ ಸಣ್ಣ ಹನುಮಂತಪ್ಪ ಗೃಹ ಸಚಿವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಸಾಕ್ಷಿಗಾಗಿ ಪೊಲೀಸ್ ಠಾಣೆಗೆ ನನ್ನ ಕರೆಸಿಕೊಂಡ ಪೊಲೀಸರು ಗಂಭೀರವಲ್ಲದ ಪ್ರಕರಣದಲ್ಲಿ ಕೂಡಿ ಹಾಕಿದ್ದಾರೆ. ಅಲ್ಲದೆ ಕೈಗೆ ಬೇಡಿ ಹಾಕಿದ್ದನ್ನು ವಿವರಿಸಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು, ''ಸಣ್ಣ ಹನುಮಂತಪ್ಪ ಅವರು ಗೃಹ ಸಚಿವರಿಗೆ ಬರೆದಿರುವ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಡಿಎಸ್​ಪಿಯವರಿಂದ ವಿವರವನ್ನು ಕೇಳಿದ್ದೇನೆ. ನಮ್ಮವರದ್ದು ತಪ್ಪು ಇದ್ದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು. ಅವನ ಮೇಲೆ ಈಗಾಗಲೇ ಒಂದು ಕೇಸ್ ರಿಜಿಸ್ಟರ್ ಆಗಿದೆ. ಅದಕ್ಕಿಂತ ಮುಂಚೆ ನಮ್ಮಲ್ಲಿ ಒಂದು ಪಿಟೀಷನ್ ಇತ್ತು. ಈ ಹಿಂದೆ ಗಲಾಟೆ ಮಾಡಿದ್ದಕ್ಕೆ ಅದೇ ಊರಿನವರು ಅವನು ಮಿಸ್​ಯೂಸ್ ಮಾಡುತ್ತಿದ್ದಾನೆ ಎಂದು ಪಿಟೀಷನ್ ಕೊಟ್ಟಿದ್ದರಂತೆ, ಈ ಬಗ್ಗೆ ನಮ್ಮ ಇಲಾಖೆಯವರು ತನಿಖೆಯನ್ನು ನಡೆಸಿದ್ದರಂತೆ. ಈ ಬಗ್ಗೆ ಗಂಗಾವತಿ ಡಿಎಸ್​ಪಿಯವರಿಗೆ ವರದಿ ಕೇಳಿದ್ದೇನೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆ'' ಎಂದರು.

ಇದನ್ನೂ ಓದಿ: ಗ್ರಾಪಂ ಸದಸ್ಯೆಯ ಕಿಡ್ನ್ಯಾಪ್​ ಯತ್ನ ಆರೋಪ.. ದೂರು, ಪ್ರತಿ ದೂರು ದಾಖಲು!

Last Updated : Aug 3, 2023, 4:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.