ಕುಷ್ಟಗಿ (ಕೊಪ್ಪಳ) : ಗ್ರಾ.ಪಂ ಚುನಾವಣೆಯ ಸ್ಪರ್ಧಿಗಳು ಮತ್ತು ಸೂಚಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಹಿನ್ನೆಲೆಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಕೋವಿಡ್ ಟೆಸ್ಟ್ಗೆ ಮಾಡಿಸಿಕೊಳ್ಳಲು ಮುಗಿಬಿದ್ದದ್ದು ಕಂಡುಬಂತು.
ಆಸ್ಪತ್ರೆಗಳಲ್ಲಿ ಒಪಿಡಿ ಚೀಟಿಯೊಂದಿಗೆ ಮೊಬೈಲ್ನಲ್ಲಿ ಆನ್ಲೈನ್ ನೋಂದಣಿ ಮಾಡಿ, ಒಟಿಪಿ ಪಡೆದು ವಿಳಾಸದ ವಿವರ ದಾಖಲಿಸಿದ ನಂತರ ಕೋವಿಡ್ ಟೆಸ್ಟ್ಗೆ ಸರದಿಯಲ್ಲಿ ನಿಂತು ಕಾಯಬೇಕಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ದಾಖಲೆ ಮಾಡಿಸಿಕೊಳ್ಳಲು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.
ಓದಿ : ಕೊಪ್ಪಳ: ಬಸ್ ನಿಲ್ದಾಣದಲ್ಲೇ ಅಡುಗೆ ಮಾಡಿ ಊಟ ಮಾಡಿದ ಸಾರಿಗೆ ಸಿಬ್ಬಂದಿ
ಕೋವಿಡ್ ಟೆಸ್ಟ್ಗೆ ಎರಡ್ಮೂರು ದಿನ ಹಿಡಿಯುತ್ತಿದೆ. ಇತರೆ ದಾಖಲಾತಿ ಹೊಂದಿಸಿಕೊಳ್ಳುತ್ತಾ, ಅಲ್ಲಿ ಇಲ್ಲಿ ಅಲೆದಾಡಿದರೆ ಮತದಾರರನ್ನು ಭೇಟಿ ಮಾಡುವುದಕ್ಕೆ ಸಮಯ ಸಿಗುವುದಿಲ್ಲ ಎಂದು ಕಂದಕೂರು ಗ್ರಾಮದ ಮಾರುತಿ ಹಲಗಿ ಹೇಳಿದ್ದಾರೆ.
ಈ ಕುರಿತು ತಹಶೀಲ್ದಾರ್ ಎಂ.ಸಿದ್ದೇಶ್ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದೆ. ತಾಲೂಕಿನಲ್ಲಿ 11 ಪ್ರಾಥಮಿಕ ಕೇಂದ್ರಗಳಿವೆ, ಇದರ ಜೊತೆಗೆ ತಾಲೂಕು ಆಸ್ಪತ್ರೆಯಲ್ಲೂ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.