ಕೊಪ್ಪಳ : ಕೊರೊನಾ ಸೋಂಕಿನ ತಡೆಗೆ ಜಾಗೃತಿ ಮೂಡಿಸಲು ಕೊಪ್ಪಳದಲ್ಲಿ ಪೊಲೀಸರು ಇಂದು ಸಂಜೆ ಪಥ ಸಂಚಲನ ನಡೆಸಿದರು.

ನಗರದ ಅಶೋಕ್ ಸರ್ಕಲ್ನಿಂದ ಜವಾಹರ ರಸ್ತೆ, ಗಡಿಯಾರ ಕಂಬ ಸರ್ಕಲ್, ಸಾಲರಜಂಗ್ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಕೊರೊನಾ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಲಾಕ್ಡೌನ್ ಆಗಿದೆ. ಯಾರೂ ಗುಂಪಾಗಿ ಸೇರದಂತೆ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಹಾಗೂ ಅನಗತ್ಯ ಸಂಚರಿಸದಂತೆ ಸೂಚನೆ ನೀಡಿದರು.
ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಥ ಸಂಚಲನದಲ್ಲಿ ಪೊಲೀಸರು ಜನರಿಗೆ ಮಾಹಿತಿ ನೀಡಿದರು.