ETV Bharat / state

ಏಪ್ರಿಲ್​ ಅಂತ್ಯಗೊಳಗೆ ಕೊಪ್ಪಳದಲ್ಲಿ ಕೊರೊನಾ ಟೆಸ್ಟಿಂಗ್​​ ಲ್ಯಾಬ್​​ ಪ್ರಾರಂಭ: ಸಚಿವ ಬಿ.ಸಿ.ಪಾಟೀಲ್​​​​

ಸಾಮಾಜಿಕ ಪಿಡುಗು ಕೊರೊನಾ ತೊಲಗಿಸಲು ಜನರು ಜವಾಬ್ದಾರಿಯಿಂದ ವರ್ತಿಸಬೇಕು. ಅನಗತ್ಯವಾಗಿ ಓಡಾಡುವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್​​ ಎಚ್ಚರಿಸಿದರು.

corona-test-lab-open-soon-in-koppal
ಸಚಿವ ಬಿ.ಸಿ.ಪಾಟೀಲ್
author img

By

Published : Apr 18, 2020, 7:50 PM IST

ಕೊಪ್ಪಳ: ಈ ತಿಂಗಳ ಅಂತ್ಯದೊಳಗೆ ಕೊಪ್ಪಳದಲ್ಲಿ ಕೋಟಿ ರೂಪಾಯಿ ವೆಚ್ಚದಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ ಮತ್ತು ಸರ್ಕಾರದ ಸೂಚನೆಯಂತೆ ರ್ಯಾಪಿಡ್ ಟೆಸ್ಟಿಂಗ್ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೂ 286 ಜನರ ಪೈಕಿ 262 ಜನರ ವರದಿ ನೆಗೆಟಿವ್ ಬಂದಿವೆ. ಇನ್ನೂ 24 ಜನರ ವರದಿ ಬರಬೇಕಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ‌ ಪತ್ತೆಯಾಗಿಲ್ಲ. ಹೀಗಾಗಿ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಅಭಿನಂದಿಸುತ್ತೇನೆ ಎಂದರು.

ಸಚಿವ ಬಿ.ಸಿ.ಪಾಟೀಲ್​​​​

ಗಂಗಾವತಿ ಭಾಗದಲ್ಲಿ ಭತ್ತ ಕಟಾವು ಪ್ರಾರಂಭವಾಗಿದೆ. ಭತ್ತದ ಸಾಗಾಟಕ್ಕೆ ಯಾವುದೇ‌ ನಿರ್ಬಂಧವಿಲ್ಲ. ಭತ್ತ ಖರೀದಿಗೆ ಇರುವವರನ್ನು ಗಡಿ ಭಾಗದಲ್ಲಿಯೇ ತಪಾಸಣೆ ನಡೆಸಬೇಕು. ಅವರ ಆರೋಗ್ಯ ತಪಾಸಣೆ ಮಾಡಿ ಜಿಲ್ಲೆಯೊಳಗೆ ಬಿಡಬೇಕು ಎಂದು ಸೂಚಿಸಲಾಗಿದೆ. ಕೊರೊನಾ‌ ನಿಯಂತ್ರಿಸಲು ಜನರ ಜವಾಬ್ದಾರಿಯೂ ಇದೆ ಎಂದರು.

ದಿನಸಿ ಅಂಗಡಿಗಳಲ್ಲಿ‌ ಹೆಚ್ಚಿನ ವಸ್ತುಗಳ ದರದ ನಾಮಫಲಕ ಹಾಕಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹವರನ್ನು ಬಂಧಿಸಬೇಕು.‌ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದೇನೆ ಎಂದು ಬಿ.ಸಿ.ಪಾಟೀಲ್ ಹೇಳಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.