ETV Bharat / state

ಉಸಿರಾಟದ ತೊಂದರೆಯಿಂದ ಮೃತಪಟ್ಟ ವ್ಯಕ್ತಿಯ ವರದಿ ಕೊರೊನಾ ನೆಗೆಟಿವ್: ಡಿಸಿ

ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ನಿನ್ನೆ ಚಿಕಿತ್ಸೆಗಾಗಿ ಕೊಪ್ಪಳದ ಆಸ್ಪತ್ರೆಗೆ ಕರೆ ತರುವಾಗ ಕೊನೆಯುಸಿರೆಳೆದಿದ್ದರು.

sunil kumar
ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್
author img

By

Published : Apr 30, 2020, 9:39 AM IST

ಕೊಪ್ಪಳ: ಉಸಿರಾಟದ ತೊಂದರೆಯಿಂದ ಸಾವಿಗೀಡಾದ ಕನಕಗಿರಿ ತಾಲೂಕಿನ ಆದಾಪುರ ಗ್ರಾಮದ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ ಬಂದಿರುವುದಾಗಿ ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ಶ್ವಾಸಕೋಶ (SARI Case) ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ನಿನ್ನೆ ಚಿಕಿತ್ಸೆಗಾಗಿ ಕೊಪ್ಪಳದ ಆಸ್ಪತ್ರೆಗೆ ಕರೆ ತರುವಾಗ ಮೃತನಾಗಿದ್ದರು. ಬಳಿಕ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಈ ವರದಿ ನೆಗೆಟಿವ್ ಬಂದಿದೆ.

ನಿನ್ನೆ ರಾತ್ರಿಯವರೆಗೆ ಜಿಲ್ಲೆಯಲ್ಲಿ ಒಟ್ಟು 868 ಜನರ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ಕಳಿಸಲಾಗಿತ್ತು. ಆ ಎಲ್ಲ 868 ಜನರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.