ಕೊಪ್ಪಳ: ಜಿಲ್ಲೆಯಲ್ಲಿ ಮೇ. 18ರಂದು ಪತ್ತೆಯಾದ ಮೂವರು ಸೋಂಕಿತರ ಪೈಕಿ ರೋಗಿ-1173ರ ಟ್ರಾವೆಲ್ ಹಿಸ್ಟರಿ ಆತಂಕಕ್ಕೆ ಕಾರಣವಾಗಿದ್ದು, ಮಹಾರಾಷ್ಟ್ರದಿಂದ ಲಾರಿಯಲ್ಲಿ ಬಂದ ಸೋಂಕಿತ ವ್ಯಕ್ತಿ ಗಡಿಭಾಗದ ಚೆಕ್ ಪೋಸ್ಟ್ಗಳಲ್ಲಿ ತಪ್ಪಿಸಿಕೊಂಡು ಜಿಲ್ಲೆಗೆ ಬಂದಿರೋದು ಬೆಳಕಿಗೆ ಬಂದಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, P-1173 ಸೇವಾ ಸಿಂಧುನಲ್ಲಿ ನೋಂದಣಿ ಮಾಡಿರಲಿಲ್ಲ. ಅಲ್ಲದೆ ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಬಂದ ವ್ಯಕ್ತಿ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ಪರೀಕ್ಷೆಗೆ ಒಳಪಡದೆ ತಪ್ಪಿಸಿಕೊಂಡಿದ್ದಾನೆ.
ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಟಾಟಾ ಏಸ್ ಮೂಲಕ ಬಂದಿದ್ದು, ಇದುವರೆಗೂ ವಾಹನ ಚಾಲಕ ಪತ್ತೆಯಾಗಿಲ್ಲ. ಜೊತೆಗೆ ಸಹ ಪ್ರಯಾಣಿಕರ ಮಾಹಿತಿ ಲಭ್ಯವಾಗುತ್ತಿಲ್ಲ. ಸದ್ಯ ಇವರಿಬ್ಬರೂ ರೋಗಿ-1173 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ.
ಕಳೆದ ನಾಲ್ಕು ದಿನದಿಂದ ಈ ಇಬ್ಬರನ್ನು ಟ್ರೇಸ್ ಮಾಡುತ್ತಿದ್ದರೂ ಪತ್ತೆಯಾಗುತ್ತಿಲ್ಲ. ಅಲ್ಲದೆ ವಾಹನದಲ್ಲಿ ಬಂದ ಸಹ ಪ್ರಯಾಣಿಕ ಮೊಬೈಲ್ ನಂಬರ್ ತಪ್ಪು ಕೊಟ್ಟಿದಾನೆ. ಅವರು ಕೊಟ್ಟ ನಂಬರ್ ತಮಿಳುನಾಡಿಲ್ಲಿ ಟ್ರೇಸ್ ಆಗ್ತಿದೆ. ಹೀಗಾಗಿ P - 1173 ಪ್ರಯಾಣ ಇತಿಹಾಸ ಆತಂಕಕಾರಿಯಾಗಿದೆ. ಸದ್ಯ ಪ್ರಾಥಮಿಕ ಸಂಪರ್ಕ ಹೊಂದಿರುವ ಇಬ್ಬರ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.