ETV Bharat / state

ಕಮಲ ಬಿಟ್ಟು ತೆನೆ ಹೊತ್ತ ಕೈ ಮಾಜಿ ಸಂಸದರ ಪುತ್ರ: ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ - ಕಾಂಗ್ರೆಸ್ ಪಕ್ಷದ ಟಿಕೆಟ್

ಕಾಂಗ್ರೆಸ್​ ಪಕ್ಷದ ಮಾಜಿ ಸಂಸದ ರಾಮುಲು ಅವರ ಕಿರಿಯ ಪುತ್ರ ಎಚ್​ ಆರ್​ ಚನ್ನಕೇಶವ ಅವರು ಬಿಜೆಪಿ ತೊರೆದು ಜೆಡಿಎಸ್​ ಪಕ್ಷವನ್ನು ಸೇರಿಕೊಂಡಿದ್ದಾರೆ.

Congress MP Son left BJP and joined JDS
ಕಮಲದ ಭಾರ ಇಳಿಸಿ ತೆನೆ ಹೊತ್ತ ಕೈ ಮಾಜಿ ಸಂಸದರ ಪುತ್ರ
author img

By

Published : Mar 30, 2023, 8:57 PM IST

ಗಂಗಾವತಿ: 2023ರ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿದ್ದ ಕಾಂಗ್ರೆಸ್ ಪಕ್ಷದ‌ ಮಾಜಿ‌ ಸಂಸದ ರಾಮುಲು ಅವರ ಕಿರಿಯ ಪುತ್ರ ಎಚ್.ಆರ್. ಚನ್ನಕೇಶವ ಜೆಡಿಎಸ್ ಸೇರಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಬಿಜೆಪಿಯಿಂದ ಜೆಡಿಎಸ್​ಗೆ: 2018ರಲ್ಲಿ ಬಿಜೆಪಿಯ ಟಿಕೆಟ್ ಬಯಸಿ ಪಕ್ಷದಲ್ಲಿದ್ದ ಬಳಿಕ ಸೂಕ್ತ ಸ್ಥಾನಮಾನದ ಭರವಸೆ ಈಡೇರದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ಪುತ್ರ ಉದ್ಯಮಿ ಎಚ್.ಅರ್. ಚನ್ನಕೇಶವ ಇದೀಗ ಜೆಡಿಎಸ್ ಪಕ್ಷ ಸೇರಿದ್ದಾರೆ. ಅವರು ಗಂಗಾವತಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ರಾಮುಲು ಅವರ ಕಿರಿಯ ಪುತ್ರ ಎಚ್.ಆರ್. ಚನ್ನಕೇಶವ, ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್​ನಿಂದ ಸ್ಪರ್ಧೆ: 2013ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಎಚ್.ಆರ್. ಚನ್ನಕೇಶವ, ನಂತರ ಬಿಜೆಪಿ ಪಕ್ಷ ಸೇರ್ಪಡೆಯಾಗಿ 2014 ರ ಲೋಕಸಭಾ ಹಾಗೂ 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಹರಸಾಹಸ ನಡೆಸಿ ವಿಫಲರಾಗಿದ್ದರು. ಬಿಜೆಪಿ ಮುಖಂಡರ ರಾಜಿ ಸಂಧಾನದ ನಂತರ ಬಿಜೆಪಿಯಲ್ಲಿ ಮುಂದುವರೆದಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮ ಹಾಗೂ ಪಕ್ಷದ ರಾಜ್ಯ ಮುಖಂಡರ ಗಂಗಾವತಿ ಕೊಪ್ಪಳ ಭೇಟಿ ಸಂದರ್ಭದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರ ವರ್ತನೆಗೆ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಇಡೀ ಕ್ಷೇತ್ರದಾದ್ಯಂತ ಸಂಚಾರ ಮಾಡಿ ಸಿದ್ಧತೆ ನಡೆಸಿದ್ದರು.

ಎಚ್​ಡಿಕೆ ದೂರವಾಣಿ ಕರೆ: ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಚನ್ನಕೇಶವ ಅವರಿಗೆ ದೂರವಾಣಿ ಕರೆ ಮಾಡಿ ಗಂಗಾವತಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಒಂದೊಮ್ಮೆ ಜೆಡಿಎಸ್ ಪಕ್ಷ ಸೇರಿದರೆ, ಗಂಗಾವತಿಯಲ್ಲಿ ಅಭ್ಯರ್ಥಿಯಾಗಿ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಪಕ್ಷ ಸೇರಿದ್ದಾರೆ.

ಬಿಜೆಪಿಯಿಂದ ವಂಚನೆ- ಚನ್ನಕೇಶವ : ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚನ್ನಕೇಶವ, ಬಿಜೆಪಿ ಪಕ್ಷಕ್ಕಾಗಿ ಕಳೆದ ಮೂರು ನಾಲ್ಕು ಚುನಾವಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದರೂ ನನ್ನನ್ನು ನಿರ್ಲಕ್ಷ್ಯ ಮಾಡಲಾಗಿದೆ. ಬಿಜೆಪಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿರೋಧಿಯಾಗಿದ್ದು, ಮೋಸ ಮಾಡುವ ಪಕ್ಷವಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ನಮ್ಮ ತಂದೆ ಹೆಚ್.ಜಿ. ರಾಮುಲು ಕೆಲಸ ಮಾಡಿದ್ದಾರೆ. ಜನರು ತಮ್ಮ ಕುಟುಂಬದ ಮೇಲೆ ಪ್ರೀತಿ ವಿಶ್ವಾಸವಿಟ್ಟಿದ್ದು, ಇದೀಗ ಜೆಡಿಎಸ್ ಪಕ್ಷದ ಮುಖಂಡ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ಪ ಕ್ಷಕ್ಕೆ ಸೇರಿದ್ದೇನೆ. ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ವತಿಯಿಂದ ಸ್ಪರ್ಧೆ ಮಾಡಲಿದ್ದೇನೆ ಎಂದರು.

ಜನರು ತಮ್ಮ ಕುಟುಂಬದ ಮೇಲೆ ಪ್ರೀತಿ ವಿಶ್ವಾಸವಿಟ್ಟಿದ್ದು, ಇದೀಗ ಜೆಡಿಎಸ್ ಪಕ್ಷದ ಮುಖಂಡ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್​ ಪಕ್ಷಕ್ಕೆ ಸೇರಿದ್ದೇನೆ. ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ವತಿಯಿಂದ ಸ್ಪರ್ಧೆ ಮಾಡಲಿದ್ದೇನೆ ಎಂದು ಚನ್ನಕೇಶವ ಹೇಳಿದರು.

ಇದನ್ನೂ ಓದಿ: ಜೆಡಿಎಸ್​​ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್​ ಕಾಂಗ್ರೆಸ್​ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.