ಗಂಗಾವತಿ: ಕಳೆದ ಎರಡು ವರ್ಷದಿಂದ ಪೌರಕಾರ್ಮಿಕರಿಗೆ ಸಕಾಲಕ್ಕೆ ಸೂಕ್ತ ವೇತನ ನೀಡದೆ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಸತಾಯಿಸುತ್ತಿರುವ ಘಟನೆ ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.
ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರು, ಕಸದ ವಾಹನ ತಳ್ಳುವವರು, ಜವಾನ, ಕಸ ಗೂಡಿಸುವವರು ಹೀಗೆ ನಾನಾ ವಿಭಾಗದಲ್ಲಿ ಕೆಲಸ ಮಾಡುವ 21 ಜನರಿಗೆ ಕಳೆದ ಎರಡು ವರ್ಷದಿಂದ ಸಕಾಲಕ್ಕೆ ವೇತನವಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ ಕಾರ್ಮಿಕರು ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ಮಕ್ಕಳ ಶಾಲೆಯ ಶುಲ್ಕ ಕಟ್ಟಲು, ಸಮವಸ್ತ್ರ ಖರೀದಿ ಮಾಡಲು ಮತ್ತು ಒಂದು ಹೊತ್ತು ಊಟಕ್ಕೂ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.