ಗಂಗಾವತಿ: ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೇರೂರಿನಲ್ಲಿ ನಡೆದಿದೆ.
ಘಟನೆಗೆ ಗ್ರಾಮ ಪಂಚಾಯತ್‌ನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು, ಪಂಚಾಯತ್ ಮುಂದೆ ಮೃತ ಬಾಲಕನ ಶವ ಇಟ್ಟು ಪ್ರತಿಭಟನೆ ನಡೆಸಿದರು. ಷರೀಫ್ ಹುಸೇನಸಾಬ (14) ಮೃತ ಬಾಲಕ. ಗ್ರಾಮದ ವಿರುಪಣ್ಣ ತಾತನ ಹಳ್ಳಕ್ಕೆ ಕೃಷಿ ಹೊಂಡ ಮಾಡಲಾಗಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಸಾಕಷ್ಟು ನೀರು ಸಂಗ್ರಹವಾಗಿತ್ತು.
ಎಂದಿನಂತೆ ಬಾಲಕ ಜಾನುವಾರುಗಳಿಗೆ ನೀರು ಕುಡಿಸಲು ಹಳ್ಳಕ್ಕೆ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಗ್ರಾಮಸ್ಥರು ಬಾಲಕನ ಶವವನ್ನು ಹೊಂಡದಿಂದ ತೆಗೆದು ಪಂಚಾಯತ್ ಮುಂದೆ ಅದನ್ನಿರಿಸಿ ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ.