ETV Bharat / state

ಕೊಪ್ಪಳದಲ್ಲಿ ಕೇಂದ್ರದಿಂದ ಮಂಜೂರಾಗಿದ್ದ ಆಕ್ಸಿಜನ್ ಉತ್ಪಾದನಾ ಘಟಕ ಪ್ರಾರಂಭ

ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಆಕ್ಸಿಜನ್ ಘಟಕ ನಿರ್ಮಾಣ ಕಾರ್ಯ ಕಳೆದ ಒಂದು ತಿಂಗಳಿಂದ ನಡೆದಿತ್ತು. ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಘಟಕ ಪ್ರಾರಂಭಗೊಂಡಿದ್ದು, ಪ್ರತಿ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆಯಾಗಲಿದೆ.

koppal
ಆಕ್ಸಿಜನ್ ಉತ್ಪಾದನಾ ಘಟಕ
author img

By

Published : Jun 20, 2021, 1:48 PM IST

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ಆಕ್ಸಿಜನ್ ಉತ್ಪಾದನಾ ಘಟಕ ಪ್ರಾರಂಭಗೊಂಡಿದ್ದು, ಪ್ರತಿ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆಯಾಗಲಿದೆ.

ಆಕ್ಸಿಜನ್ ಉತ್ಪಾದನಾ ಘಟಕ ಪ್ರಾರಂಭ

ಇಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಸುಮಾರು 60 ರಿಂದ 70 ಬೆಡ್​ನ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಹೀಗಾಗಿ ಜಿಲ್ಲಾಸ್ಪತ್ರೆಯ ವೈದ್ಯರು ಕೊಂಚ‌ ನಿರಾಳರಾಗಿದ್ದಾರೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ರೋಗಿಗಳು ಆಕ್ಸಿಜನ್ ಇಲ್ಲದೆ ಪರದಾಡುವಂತಾಗಿತ್ತು. ಎರಡನೇ ಅಲೆಯಲ್ಲಾದ ತೊಂದರೆಯಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಹೊರಗಡೆಯಿಂದ ಖರೀದಿಸುವ ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನದಲ್ಲಿದೆ.

ಅದರ ಭಾಗವಾಗಿ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಆಕ್ಸಿಜನ್ ಘಟಕ ನಿರ್ಮಾಣ ಕಾರ್ಯ ಕಳೆದ ಒಂದು ತಿಂಗಳಿಂದ ನಡೆದಿತ್ತು, ಅದು ಈಗ ಕಂಪ್ಲೀಟ್ ಆಗಿದೆ. ಸುಮಾರು 90 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆಕ್ಸಿಜನ್ ಉತ್ಪಾದನಾ ಘಟಕ ಪ್ರತೀ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಲಿದೆ. ಈ ಘಟಕದಿಂದ ಉತ್ಪಾದನೆಯಾಗುವ ಆಕ್ಸಿಜನ್​ನಲ್ಲಿ ಸುಮಾರು 60 ರಿಂದ 70 ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಕಿಮ್ಸ್ ನ ನಿರ್ದೇಶಕ ಡಾ. ವೈಜನಾಥ ಇಟಗಿ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.