ಗಂಗಾವತಿ: ಮೆರವಣಿಯೊಂದರ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಿಂದೂ ಪರ ಸಂಘಟನೆಯ ಶ್ರೀಕಾಂತ್ ಹೊಸಕೇರಿ ಎಂಬುವರು ನೀಡಿದ ದೂರಿನ ಮೇರೆಗೆ ಗಂಗಾವತಿ ನಗರದ ಕಿಲ್ಲಾ ಏರಿಯಾದ ಮೊಹ್ಮದ್ರಫಿ ನಭಿಸಾಬ, ನಭಿಸಾಬ ಖಾಸೀಂಸಾಬ, ಎಬಿಡಿ ಮಹೇಬೂಬ ಎಂಬುವರ ವಿರುದ್ಧ 1971ರ ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ ಅಡಿ ದೂರು ದಾಖಲಾಗಿದೆ.
ಇದನ್ನೂ ಓದಿ: ಲಿಮ್ಕಾ ದಾಖಲೆ ಬರೆದ 13 ಸಾವಿರ ಮೀಟರ್ ಬಟ್ಟೆಯಲ್ಲಿ ತಯಾರಾದ ರಾಷ್ಟ್ರಧ್ವಜ
ಮೆರವಣಿಗೆಯೊಂದರ ಸಂದರ್ಭದಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ ತೆಗೆದು ಅರ್ಧ ಚಂದ್ರಾಕೃತಿ ಇಟ್ಟು ಧ್ವಜವನ್ನು ಅಪಮಾನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.