ETV Bharat / state

ಎಲೆಕ್ಷನ್ ಮೂಡಿಂದ್ ರಿಲ್ಯಾಕ್ಸ್ ಮೂಡಿಗೆ ಜಾರಿದ ಅಭ್ಯರ್ಥಿಗಳು..

ರಿಲ್ಯಾಕ್ಸ್​ ಮೂಡ್​ನಲ್ಲಿರುವ ಅಭ್ಯರ್ಥಿಗಳೆಲ್ಲಾ ಸಂಬಂಧಿಕರು, ಹಿತೈಷಿಗಳ ಜೊತೆಗೆ ಸಮಯ ಕಳೆಯುತ್ತಿದ್ದಾರೆ.

Candidates in relaxed mood from election mood
ಎಲೆಕ್ಷನ್ ಮೂಡಿಂದ್ ರಿಲ್ಯಾಕ್ಸ್ ಮೂಡಿಗೆ ಜಾರಿದ ಅಭ್ಯರ್ಥಿಗಳು
author img

By

Published : May 11, 2023, 6:27 PM IST

Updated : May 11, 2023, 7:34 PM IST

ರಿಲ್ಯಾಕ್ಸ್​ ಮೂಡ್​ನಲ್ಲಿ ಸಚಿವ ಶ್ರೀರಾಮುಲು

ಕೊಪ್ಪಳ/ಬಳ್ಳಾರಿ: ಕಳೆದ ಒಂದು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಇಡೀ ತಿಂಗಳು ಜಾಗೃತವಾಗಿದ್ದ ಅಭ್ಯರ್ಥಿಗಳು ಇಂದು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶ್ರೀರಾಮುಲು ನಗರದ ತಮ್ಮ ನಿವಾಸದಲ್ಲಿ ರಿಲ್ಯಾಕ್ಸ್​​ ಮೂಡ್​ನಲ್ಲಿದ್ದರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಜನ ಅಭ್ಯರ್ಥಿಗಳು ಇಂದು ರಿಲ್ಯಾಕ್ಸ್ ಮೂಡಿನಲ್ಲಿದ್ದು, ಮತಗಳ ಗಳಿಕೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಮೂರು ಜನರು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ.

ಮನೆಯ ಸದಸ್ಯರೊಂದಿಗೆ ಉಪಹಾರ ಸೇವಿಸಿದ ಶ್ರೀರಾಮುಲು, ದಿನಪತ್ರಿಕೆಗಳನ್ನು ತಿರುವಿ ಹಾಕಿದರು. ಮೊಬೈಲ್​ನಲ್ಲಿ ಬರುವ ಸಂದೇಶಗಳನ್ನು ಗಮನಿಸುತ್ತಾ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ನಿನ್ನೆಯಷ್ಟೇ ಮುಗಿದಿರುವ ಮತದಾನದ ಹಿನ್ನೆಲೆಯಲ್ಲಿ ಯಾವ ಯಾವ ಮತಗಟ್ಟೆಯಲ್ಲಿ ತಮ್ಮ ಪಕ್ಷಕ್ಕೆ ಎಷ್ಟು ಮತ ಬಂದಿರಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸ್ನೇಹಿತರು, ಹಿತೈಷಿಗಳು ಮತ್ತು ರಾಜಕೀಯ ಸಂಬಂಧಿತ ಗೆಳೆಯರೊಂದಿಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸುತ್ತಿರುವುದು ಕಂಡು ಬಂದಿತು.

ರಿಲ್ಯಾಕ್ಸ್​ ಮೂಡ್​ನಲ್ಲಿರುವ ಅಭ್ಯರ್ಥಿಗಳು

ಕೊಪ್ಪಳ ವಿಧಾನಸಭೆಗೆ ಸ್ಪರ್ಧಿಸಿರುವ ಶಾಸಕ ಕೆ ರಾಘವೇಂದ್ರ ಹಿಟ್ನಾಳ್​ ಕಳೆದ ಒಂದು ತಿಂಗಳು ಬಿಡುವಿಲ್ಲದೆ ಪ್ರಚಾರದಲ್ಲಿ ತೊಡಗಿದ್ದರು. ಇಂದು ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇಂದು ಮುಂಜಾನೆಯಿಂದ ರಿಲ್ಯಾಕ್ಸ್ ಮೂಡಲ್ಲಿರುವ ಹಿಟ್ನಾಳ್​, ಕ್ಷೇತ್ರದ ವಿವಿಧೆಡೆಯಿಂದ ಬಂದಿರುವ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ, ನನಗೇನು ರಿಲ್ಯಾಕ್ಸ್ ಎನ್ನುವುದು ಇಲ್ಲ. ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಿನಂತೆ ಇದ್ದು ಇಂದು ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಮತಗಳ ಕುರಿತು ಮಾಹಿತಿ ಪಡೆದಿದ್ದೇನೆ. ಅಲ್ಲದೆ ಮತ ಎಣಿಕೆ ಕುರಿತು ಸಿದ್ಧಗೊಳಿಸುತ್ತಿದ್ದೇನೆ. ಈ ಬಾರಿಯೂ ಕೊಪ್ಪಳದ ಜನತೆ ಕಳೆದ ಬಾರಿಗಿಂತ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ. ಬಿಜೆಪಿಯೇ ನನಗೆ ನೇರ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ಬಿಜೆಪಿಯಿಂದ ಸ್ಪರ್ಧಿಸಿರುವ ಸಂಸದ ಕರಡಿ ಸಂಗಣ್ಣನವರ ಸೊಸೆ ಮಂಜುಳಾ ಕರಡಿ ಸಹ ಇಂದು ಪ್ರಚಾರ ಕಾರ್ಯದಿಂದ ದೂರವಿದ್ದರು. ಆದರೆ ಮೊದಲಿನಿಂದಲೂ ರೂಢಿಸಿಕೊಂಡಂತೆ ಇಂದು ರಾಯರ ಮಠಕ್ಕೆ ಹೋಗಿ ಬಂದು ನಂತರ ಕುಟುಂಬದವರೊಂದಿಗೆ ಇದ್ದರು. ಅತ್ತೆ, ನಾದಿನಿ ಹಾಗು ಸಂಬಂಧಿಗಳೊಂದಿಗೆ ಬೆರತಿದ್ದರು. ವಿವಿಧ ಗ್ರಾಮಗಳಿಂದ ಬಂದಿದ್ದ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿದರು. ಇನ್ನೂ ಕೆಲವು ಕಡೆ ಹೋಗಿ ಅಲ್ಲಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಕುಟುಂಬ ರಾಜಕೀಯದಲ್ಲಿರುವುದರಿಂದ ಚುನಾವಣೆ ಹೊಸದಲ್ಲ. ಹಿಂದೆ ನಮ್ಮ ಮಾವನವರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೇನೆ. ಈಗ ನೇರವಾಗಿ ನಾನೇ ಅಭ್ಯರ್ಥಿಯಾಗಲು ಬಿಜೆಪಿ ಮುಖಂಡರು ಕಾರಣ. ಖಂಡಿತವಾಗಿಯೂ ನಾನು ಗೆಲ್ಲುತ್ತೇನೆ. ನೇರವಾಗಿ ಯಾರು ಪ್ರತಿ ಸ್ಪರ್ಧಿ ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಪ್ರಥಮ ಬಾರಿ ಸ್ಪರ್ಧಿಸಿರುವ ಸಿ ವಿ ಚಂದ್ರಶೇಖರ ಸಹ ಇಂದು ಸಂಪೂರ್ಣ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಮುಂಜಾನೆ ಎದ್ದು ಪತ್ನಿ, ತಂಗಿಯ ಮೊಮ್ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದು, ಮನೆಗೆ ಬಂದಿರುವ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿವಿಸಿ ಜೆಡಿಎಸ್​ನಿಂದ ಸ್ಪರ್ಧಿಸುವಾಗ ಅಲ್ಪ ಸಮಯದಲ್ಲಿ ಕೊಪ್ಪಳ ಕ್ಷೇತ್ರದಾದ್ಯಂತ ಸಂಚರಿಸಿದ್ದೇನೆ. ಜನ ಬದಲಾವಣೆ ಬಯಸಿದ್ದಾರೆ. ಖಂಡಿತವಾಗಿಯೂ ನಾನು ಗೆಲ್ಲುತ್ತೇನೆ. ನನಗೆ ನೇರ ಪ್ರತಿಸ್ಪರ್ಧಿ ಕಾಂಗ್ರೆಸ್. ಕಾಂಗ್ರೆಸ್ ಹಾಗು ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ರಾಜಕೀಯ ಹಿನ್ನೆಲೆ, ಆರ್ಥಿಕ ಬಲವಿದೆ. ಆದರೆ ಏನೂ ಇಲ್ಲದ ನನಗೆ ಈಗ ಕೊಪ್ಪಳ ಜನತೆ ಅಪಾರವಾಗಿ ಬೆಂಬಲಿಸಿದ್ದಾರೆ ಎಂದರು.

ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್...

Last Updated : May 11, 2023, 7:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.