ಕೊಪ್ಪಳ: ಕೊರೊನಾ ಕಂಟ್ರೋಲ್ ಮಾಡಲು ಈಗಿರುವ ಅತ್ಯಂತ ಸೂಕ್ತ ಮಾರ್ಗ ಎಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಆದರೆ ಇದನ್ನ ಗಣನೆಗೆ ತೆಗೆದುಕೊಳ್ಳದಂತೆ ಜಿಲ್ಲೆಯ ಜನ ವರ್ತಿಸಿದ್ದು, ಜನ್ ಧನ್ ಖಾತೆಗೆ ಬಂದಿರುವ ಹಣ ಪಡೆಯಲು ಬ್ಯಾಂಕ್ ಮುಂದೆ ಮುಗಿ ಬಿದ್ದಿದ್ದಾರೆ.
ಕೊರೊನಾ ಕಂಟ್ರೋಲ್ ಮಾಡಲು ಇಡೀ ದೇಶವೇ ಲಾಕ್ಡೌನ್ ಆಗಿದೆ. ನಗರದಲ್ಲಿ ಜನರು ಲಾಕ್ಡೌನ್ ಗೆ ಕ್ಯಾರೆ ಎನ್ನದೇ ಗುಂಪು ಗುಂಪಾಗಿ ನಿಲ್ತಿದ್ದಾರೆ. ಜನಧನ್ ಯೋಜನೆ, ಕಾರ್ಮಿಕರ ಕಾರ್ಡ್ ಹಣ, ಗ್ಯಾಸ್ ಸಬ್ಸಿಡಿ ಹಣ ಡ್ರಾ ಮಾಡಲು ನಗರದ ಯೂನಿಯನ್ ಬ್ಯಾಂಕ್ ಮುಂದೆ ಜನರು ಮುಗಿಬಿದ್ದಿದ್ದರು.
ಸಾಮಾಜಿಕ ಅಂತರವನ್ನು ಮರೆತು ಬ್ಯಾಂಕ್ ಮುಂದೆ ಗುಂಪು ಗುಂಪಾಗಿ ನಿಂತುಕೊಂಡಿರುವ ದೃಶ್ಯ ಇಂದು ಕಂಡು ಬಂತು. ಅಲ್ಲದೇ ತಮ್ಮ ಜೊತೆಗೆ ಪುಟ್ಟಪುಟ್ಟ ಮಕ್ಕಳನ್ನು ಕರೆದುಕೊಂಡು ಬ್ಯಾಂಕ್ ಮುಂದೆ ಬಂದು ನಿಂತ ಜನರಿಗೆ ಬುದ್ದಿ ಹೇಳುವಲ್ಲಿ ಬ್ಯಾಂಕ್ ಸಿಬ್ಬಂದಿ ಸಹ ವಿಫಲವಾಗಿದ್ದು ಕಂಡು ಬಂದಿತು.