ETV Bharat / state

ಬೈಕ್ ಕಳ್ಳತನಕ್ಕೆ ಬ್ರೇಕ್ ಹಾಕುವ ಸಾಧನ: ಗಂಗಾವತಿ ಯುವಕನಿಂದ ಡಿವೈಸ್​ ಆವಿಷ್ಕಾರ!

ಐಟಿಐ ವ್ಯಾಸಂಗ ಮಾಡಿರುವ ಅಕ್ಬರ್, ರೇಡಿಯಸ್ ತಂತ್ರಜ್ಞಾನ ಬಳಸಿಕೊಂಡು ಬೈಕ್ ಕಳ್ಳತನ ತಡೆಯುವ ಸಾಧನವನ್ನು ಆವಿಷ್ಕರಿಸಿದ್ದಾನೆ.

Brake apparatus for bike theft
ಬೈಕ್ ಕಳ್ಳತನಕ್ಕೆ ಬ್ರೇಕ್ ಹಾಕುವ ಸಾಧನ
author img

By

Published : Feb 5, 2021, 8:24 PM IST

ಕೊಪ್ಪಳ: ಇತ್ತೀಚೆಗೆ ಬೈಕ್​ ಖದೀಮರು ಹೆಚ್ಚಾಗುತ್ತಿದ್ದು, ಹ್ಯಾಂಡ್ ಲಾಕ್ ಮಾಡಿದರೂ ಸಹ ಚಾಲಾಕಿ ಕಳ್ಳರು ಬೈಕ್​​ಗಳನ್ನು ಎಗರಿಸುತ್ತಾರೆ. ಇದರಿಂದ ಅನೇಕರು ಬೈಕ್​​​​ಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ತಪ್ಪಿಸಲು ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಯುವಕನೊಬ್ಬ ಹೊಸದೊಂದು ಡಿವೈಸ್ ಕಂಡು ಹಿಡಿದಿದ್ದಾನೆ. ಇದು ಬೈಕ್ ಕಳ್ಳತನಕ್ಕೆ ಬ್ರೇಕ್ ಹಾಕುತ್ತೆ.

ಐಟಿಐ ವ್ಯಾಸಂಗ ಮಾಡಿರುವ ಅಕ್ಬರ್ ಎಂಬ ಯುವಕ, ರೇಡಿಯಸ್ ತಂತ್ರಜ್ಞಾನ ಬಳಸಿಕೊಂಡು ಬೈಕ್ ಕಳ್ಳತನ ತಡೆಯುವ ಸಾಧನವನ್ನು ಆವಿಷ್ಕರಿಸಿದ್ದಾನೆ. ವಾಚ್ ಹಾಗೂ ಹೆಲ್ಮೆಟ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ವಾಚ್ ಅಥವಾ ಹೆಲ್ಮೆಟ್​​ನಲ್ಲಿ ಒಂದು ಡಿವೈಸ್ ಹಾಗೂ ಅದಕ್ಕೆ ಸಪೋರ್ಟ್ ಮಾಡುವ ಡಿವೈಸ್​​​ಗಳನ್ನು ಬ್ಯಾಟರಿಗೆ ಸಂಪರ್ಕ ಮಾಡಲಾಗುತ್ತದೆ. ಅದರಿಂದ ವಾಚ್ ಅಥವಾ ಹೆಲ್ಮೆಟ್ ಮೋಡ್​​​ನಲ್ಲಿ ಬೈಕ್ ಆನ್ ಆಫ್ ಮಾಡಬಹುದಾಗಿದೆ.

ಗಂಗಾವತಿ ಯುವಕನಿಂದ ಡಿವೈಸ್​ ಆವಿಷ್ಕಾರ

ಕಳ್ಳರು ಅಸಲಿ ಅಥವಾ ನಕಲಿ ಕೀ ಬಳಸಿ ಬೈಕ್ ಕಳ್ಳತನಕ್ಕೆ ಮುಂದಾದರೂ ವಾಚ್ ಅಥವಾ ಹೆಲ್ಮೆಟ್ ಡಿವೈಸ್ ಮೂಲಕ ಕಮಾಂಡ್ ಕೊಡದಿದ್ದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಹೀಗಾಗಿ ಬೈಕ್ ಕಳ್ಳತನವಾಗುವುದನ್ನು ತಡೆಯಬಹುದು. ಏಕೆಂದರೆ ಬೈಕ್ ಆನ್ ಮತ್ತು ಆಫ್ ಮಾಡುವಂತೆ ಡಿವೈಸ್ ಕಂಟ್ರೋಲ್ ಮಾಡುತ್ತದೆ.

ಅಲ್ಲದೆ ಬೈಕ್ ಸ್ಟ್ಯಾಂಡ್ ತೆಗೆಯದೆ ಇರುವುದನ್ನು ಸಹ ಬೀಪ್ ಸೌಂಡ್ ಮೂಲಕ ಎಚ್ಚರಿಸುತ್ತದೆ. ಈ ಬೈಕ್ ಸೆಕ್ಯೂರಿಟಿ ಡಿವೈಸ್ ಸುಮಾರು 14ರಿಂದ 18 ಅಡಿ ಅಂತರದಲ್ಲಿ ಕೆಲಸ ಮಾಡುತ್ತದೆ. ಒಂದು ಬೈಕ್​​ಗೆ ಈ ಡಿವೈಸ್ ಅಳವಡಿಸಲು ಸುಮಾರು 1,500 ರೂ. ಖರ್ಚು ಆಗಲಿದೆ.

ಅಕ್ಬರ್ ಈಗಾಗಲೇ ಇಂತಹ ಮೂರು ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಬೈಕ್ ಸೆಕ್ಯೂರಿಟಿ ಡಿವೈಸ್ ಹೊಸ ಪ್ರಯೋಗವಾಗಿದ್ದು, ಆತನ ಪ್ರಯತ್ನಕ್ಕೆ ಮನ್ನಣೆ ಸಿಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.