ಕುಷ್ಟಗಿ/ಕೊಪ್ಪಳ: ಕುಷ್ಟಗಿ ಪಟ್ಟಣದ ಮಾರುತಿ ವೃತ್ತದ ಬಳಿ ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಮುಖ್ಯರಸ್ತೆಗಳಲ್ಲಿ ಒಂದಾದ ಮಾರುತಿ ವೃತ್ತದಲ್ಲಿ ಅಕ್ಕಿ, ಅಡಿಕೆ, ಅರಿಶಿಣ, ಕುಂಕುಮ, ಲಿಂಬೆಹಣ್ಣು, ತೆಂಗಿನ ಕಾಯಿ, ಭಸ್ಮ ಇರಿಸಿ ಪೂಜೆ ಮಾಡಿದ್ದಾರೆ. ಮಾರುತಿ ವೃತ್ತದಲ್ಲಿ ಪೊಲೀಸರು ನಿಲ್ಲುವ ಸ್ಥಳದಲ್ಲಿಯೇ ಈ ವಾಮಾಚಾರ ಮಾಡಲಾಗಿದೆ. ಈ ಪ್ರಮುಖ ವೃತ್ತದಲ್ಲಿ ವಾಮಾಚಾರ ಮಾಡಿರುವುದನ್ನು ಕಂಡು ಜನರಲ್ಲಿ ಆತಂಕ ಮೂಡಿದೆ.
ದುರ್ಬಲ ಮನಸ್ಸಿನವರು, ಮೌಢ್ಯ ನಂಬಿರುವ ಜನರು ಈ ರೀತಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಈ ವಾಮಾಚಾರ ಸಾಮಗ್ರಿ ತೆರವುಗೊಳಿಸಿದ್ದಾರೆ.