ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಬಿಜೆಪಿ ಮುಖಂಡ ಶಶಿಧರ ಕವಲಿ ಇವರು ಡಿಸಿಎಚ್ಸಿ (ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ ಸೆಂಟರ್) ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಭಾನುವಾರ ಹಣ್ಣು, ಉಪಹಾರ ವಿತರಿಸಿದರು.
ಕೋವಿಡ್ ಸೋಂಕಿತರಾಗಿದ್ದ ತಮ್ಮ ತಾಯಿ ಗುರುಬಸಮ್ಮ ಕವಲಿ ಅವರು ಇಲ್ಲಿನ ಡಿಸಿಎಚ್ಸಿಯಲ್ಲಿ ದಾಖಲಾಗಿ ಮಾರಕ ಕೋವಿಡ್ನಿಂದ ಗೆದ್ದು ಬಂದಿರುವ ಹಿನ್ನೆಲೆ ಹಾಗೂ ಶಶಿಧರ ಕವಲಿ ಅವರ ಮದುವೆ 19ನೇ ವಾರ್ಷಿಕೋತ್ಸವ ಕೂಡ ಅಗಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಹಣ್ಣು, ಉಪಹಾರ ವಿತರಿಸಿ ಶೀಘ್ರವಾಗಿ ಗುಣಮುಖರಾಗಲು ಹಾರೈಸಿದರು.
"ನಮ್ಮ ತಾಯಿ ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿರುವುದು ಸಂತಸದ ವಿಷಯವಾಗಿದ್ದು, ಎಲ್ಲರೂ ಮಾನಸಿಕ ಸ್ಥೈರ್ಯದಿಂದ ಗುಣಮುಖರಾಗಬೇಕು. ಕೋವಿಡ್ ಭಯ ಪಡುವ ರೋಗವಲ್ಲ, ಧೈರ್ಯದಿಂದ ಎದುರಿಸಬೇಕಿದೆ." ಎಂದು ಕವಲಿ ಹೇಳಿದರು.
ಈ ವೇಳೆ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ, ಬಿಜೆಪಿ ಮುಖಂಡ ಶಶಿಧರ ಕವಲಿ, ಅವರ ಪತ್ನಿ ಬಸವರಾಜೇಶ್ವರಿ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಪ್ರಶಾಂತ್ ಗುಜ್ಜಲ್, ಚಂದ್ರು ವಡಿಗೇರಿ ಮತ್ತಿತರಿದ್ದರು.