ETV Bharat / state

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ರಾಜಕಾರಣಿಯಾಗಬಲ್ಲ: ಕಟೀಲ್

ಒಬ್ಬ ಸಾಮಾನ್ಯ ಕಾರ್ಯಕರ್ತನೂ ಕೂಡಾ ಶಾಸಕ, ಸಂಸದ, ಪಕ್ಷದ ಅಧ್ಯಕ್ಷನಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ. ಇದು ಪಕ್ಷದ ವಿಶಿಷ್ಠತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೊಪ್ಪಳ ನಗರದ ಶಿವಶಾಂತ ಮಂಗಲ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಹೇಳಿದ್ರು.

ನಳಿನ್ ಕುಮಾರ್ ಕಟೀಲ್
author img

By

Published : Sep 18, 2019, 12:03 AM IST

ಕೊಪ್ಪಳ: ಒಬ್ಬ ಸಾಮಾನ್ಯ ಕಾರ್ಯಕರ್ತನೂ ಸಹ ಶಾಸಕ, ಸಂಸದ, ಪಕ್ಷದ ಅಧ್ಯಕ್ಷರಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ. ಇದು ಬಿಜೆಪಿ ಪಕ್ಷದ ವೈಶಿಷ್ಟ್ಯತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾರಿದರು.

ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು‌ ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಯಾರು ವೇದಿಕೆಯ ಮೇಲಿರಬೇಕು, ಯಾರು ಕೆಳಗೆ ಇರಬೇಕು ಎಂಬುದನ್ನು ನಾನು ತೀರ್ಮಾನಿಸುತ್ತೇನೆ. ಉದ್ಧಟತನ ಮಾಡಿದರೆ ಪಕ್ಷದ ರಾಜ್ಯಧ್ಯಕ್ಷನಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ ಆ ಕೆಲಸವನ್ನು ನಾನು ಮಾಡುತ್ತೇನೆಂದು ಖಡಕ್ ಎಚ್ಚರಿಕೆ ನೀಡಿದರು.‌

ಸಾಮಾನ್ಯ ಕಾರ್ಯಕರ್ತ ಸಹ ಉನ್ನತ ರಾಜಕಾರಣಿಯಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ : ನಳಿನ್ ಕುಮಾರ್ ಕಟೀಲ್

ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವದಲ್ಲಿ ನಂಬಿಕೆ ಇಟ್ವವನು ನಾನು. ಅಖಂಡ ಭಾರತ ದೇಶಕ್ಕಾಗಿ ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಪಡಿಸಿದ್ದಾರೆ. ಕಾಶ್ಮೀರವನ್ನು ಉಳಿಸಿಕೊಳ್ಳುವ ಕೆಲಸವನ್ನು ಅವರು ಮಾಡಿದ್ದಾರೆ. ಮೋದಿ-ಅಮಿತ್ ಶಾ ಜೋಡಿ ಹಾಗೂ ಅಟಲ್ ಬಿಹಾರಿ ವಾಜಪೇಯಿ - ಅಡ್ವಾನಿ ಜೋಡಿ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎನ್ನುವ ಕಾಂಗ್ರೆಸ್, ಮಹಾತ್ಮ ಗಾಂಧೀಜಿಯ ತತ್ವಗಳನ್ನು, ಸಿದ್ಧಾಂತಗಳನ್ನು ಗಾಳಿಗೆ ತೂರಿದೆ. ಬಿಜೆಪಿ ರಾಮನ ಹೆಸರು ಹೇಳಿದರೆ ಕಾಂಗ್ರೆಸ್​ನವರು ಕೋಮುವಾದಿ ಎನ್ನುತ್ತಾರೆ ಎಂದು ಆರೋಪಿಸಿದರು.

Intro:

Body:ಕೊಪ್ಪಳ:- ಒಬ್ಬ ಸಾಮಾನ್ಯ ಕಾರ್ಯಕರ್ತನೂ ಸಹ ಶಾಸಕ, ಸಂಸದರಾಗುವ, ಪಕ್ಷದ ಅಧ್ಯಕ್ಷರಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ. ಇದು ಬಿಜೆಪಿ ಪಕ್ಷದ ವೈಶಿಷ್ಠ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು‌ ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಯಾರು ವೇದಿಕೆಯ ಮೇಲಿರಬೇಕು, ಯಾರು ಕೆಳಗೆ ಇರಬೇಕು ಎಂಬುದನ್ನು ನಾನು ತೀರ್ಮಾನಿಸುತ್ತೇನೆ. ಉದ್ಧಟತನ ಮಾಡಿದರೆ ಪಕ್ಷದ ರಾಜ್ಯ ಅಧ್ಯಕ್ಷನಾಗಿ ನಾನು ಏನು ಕ್ರಮ ತೆಗೆದುಕೊಳ್ಳಬೇಕೋ ಆ ಕೆಲಸವನ್ನು ನಾನು ಮಾಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.‌ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವದಲ್ಲಿ ನಂಬಿಕೆ ಇಟ್ವವನು ನಾನು. ಅಖಂಡ ಭಾರತ ದೇಶಕ್ಕಾಗಿ ಕಾಶ್ಮೀರದಲ್ಲಿ ಸಂವಿಧಾನದ 370 ನೇ ಕಲಂನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಪಡಿಸಿದ್ದಾರೆ. ಕಾಶ್ಮೀರವನ್ನು ಉಳಿಸಿಕೊಳ್ಳುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಮೋದಿ-ಅಮಿತ್ ಶಾ ಜೋಡಿ ಹಾಗೂ ಅಟಲ್ ಬಿಹಾರಿ ವಾಜಪೇಯಿ - ಅಡ್ವಾನಿ ಜೋಡಿ ಕಾಂಗ್ರೆಸ್ ಮುಕ್ತ ಮಾಡುವಲ್ಲಿ ಶ್ರಮಿಸಿದ ಜೋಡಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎನ್ನುವ ಕಾಂಗ್ರೆಸ್ ಮಹಾತ್ಮ ಗಾಂಧೀಜಿಯ ತತ್ವಗಳನ್ನು, ಸಿದ್ಧಾಂತಗಳನ್ನು ಗಾಳಿಗೆ ತೂರಿದೆ. ಬಿಜೆಪಿ ರಾಮನ ಹೆಸರು ಹೇಳಿದರೆ ಕಾಂಗ್ರೆಸ್ನವರು ಕೋಮುವಾದಿ ಎನ್ನುತ್ತಾರೆ. ಗಾಂಧೀಜಿಯವರ ತತ್ವಗಳನ್ನು ನಾವು ಆಚರಣೆಗೆ ತಂದಿದ್ದು, ರಾಜ್ಯದಲ್ಲಿನ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಉಳಿದ‌ಪೂರ್ಣ ಅವಧಿ ಮುಗಿಸುತ್ತದೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು 2013 ರಲ್ಲಿ ವಿಲನ್ ಸಿಎಂ ಇದ್ದರು. ವೋಟಿಗಾಗಿ ಜಾತಿ, ಮಠ, ಧರ್ಮವನ್ನು ಒಡೆದವರು ವಿಲನ್ ಅಲ್ಲವೇ ಎಂದು ಸಭೀಕರನ್ನು ಪ್ರಶ್ನಿಸಿದ ಕಟೀಲ್ ನಂತರ ಸಿಎಂ ಆದವರು ಸೈಡ್ ರೋಲ್ ಸಿಎಂ ಎಂದು ಟೀಕಿಸಿದರು. ಈಗಿರುವ ಸಿಎಂ ಯಡಿಯೂರಪ್ಪ ನಿಜವಾದ ಹೀರೋ ಎಂದು ಬಣ್ಣಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೈಟ್1:- ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.