ಗಂಗಾವತಿ: ಜಗನ್ನಾಥ ದಾಸರ ಜೀವನ ಸಂದೇಶ ಸಾರುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಸಿನಿಮಾದ ಚಿತ್ರೀಕರಣಕ್ಕೆ ಗಂಗಾವತಿಯ ಐತಿಹಾಸಿಕ ಪ್ರಸನ್ನ ಪಂಪಾಪತಿ ದೇಗುಲದಲ್ಲಿ ಮಾಜಿ ಎಂಎಲ್ಸಿ ಶ್ರೀನಾಥ್ ಚಾಲನೆ ನೀಡಿದರು.
ಜಗನ್ನಾಥ ದಾಸರು ದಾಸ ಸಾಹಿತ್ಯದ ಒಂದು ಪದವನ್ನು ಹಾಡುವ ಹಾಗೂ ಶಿಷ್ಯರಿಗೆ ಬೋಧಿಸುವ ದೃಶ್ಯವನ್ನು ಪ್ರಸನ್ನ ಪಂಪಾಪತಿ ದೇಗುಲದಲ್ಲೇ ಚಿತ್ರೀಕರಿಸಲಾಯಿತು.
ಬಳಿಕ ಮಾತನಾಡಿದ ನಿರ್ದೇಶಕ ಮಧುಸೂದನ ಹವಾಲ್ದಾರ್, ಈ ಭಾಗದ ಜನರಲ್ಲಿ ದಾಸ ಸಾಹಿತ್ಯದ ಬಗ್ಗೆ ಹೆಚ್ಚು ಒಲವಿದೆ. ಹೀಗಾಗಿ, ಈ ಭಾಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿ ಚಿತ್ರೀಕರಣ ಮಾಡಲಾಗುತ್ತಿದೆ.
ಒಂದುಕಾಲು ಕೋಟಿ ಮೊತ್ತದಲ್ಲಿ ಸಿನಿಮಾ ಮಾಡುವ ಉದ್ದೇಶವಿದೆ. ಆದರೆ, ಸಂಪನ್ಮೂಲದ ಸಮಸ್ಯೆಯಿಂದಾಗಿ ಇದೀಗ 32 ಕಂತುಗಳ ಧಾರಾವಾಹಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕನಕಗಿರಿ, ಗಂಗಾವತಿ, ಹೊಸಪೇಟೆ, ಹಂಪಿ, ಆನೆಗೊಂದಿ ಸುತ್ತಲೂ ಶೂಟಿಂಗ್ ನಡೆಯಲಿದೆ ಎಂದರು.