ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿರುವ ವಿಪ್ರ ದ್ಯಾವಮ್ಮನ ದೇವಸ್ಥಾನದ ಬಳಿ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿದೆ.
ಗಂಗಾವತಿಯ ರೈತ ಶರಣಪ್ಪ ಎಂಬುವರ ಮೇಲೆ ಎರಗಿದ್ದ ಕರಡಿ, ದೇಹದ ತುಂಬೆಲ್ಲಾ ಕಚ್ಚಿ ಗಾಯಗೊಳಿಸಿದೆ. ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಜಾಂಭವ ದಾಳಿ ನಡೆಸಿದೆ. ಇನ್ನು ಇದೇ ಕರಡಿ ರಾಮಣ್ಣ ಎಂಬುವರ ಮೇಲೂ ದಾಳಿ ಮಾಡಿತ್ತು ಎನ್ನಲಾಗ್ತಿದೆ.
ಗಂಭೀರವಾಗಿ ಗಾಯಗೊಂಡಿರುವ ಶರಣಪ್ಪ ಅವರು ಗಂಗಾವತಿ ಉಪ-ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.