ಗಂಗಾವತಿ: ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ನಗರಸಭೆಯ ಕಮಿಷನರ್ ದೇವಾನಂದ ದೊಡ್ಮನಿ ತೆರವುಗೊಳಿಸಿದ್ದಾರೆ.
ನಗರಸಭೆಯ ಅನುಮತಿ ಇಲ್ಲದೇ ಬ್ಯಾನರ್, ಫ್ಲೆಕ್ಸ್ ಅಳವಡಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ದೇವಾನಂದ ತಿಳಿಸಿದರು.