ETV Bharat / state

ಬಿ.ಸಿ. ಪಾಟೀಲ್​ ಆಶ್ರಯದಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎಂದು ವರದಿ ಮಾಡಿದ್ದ ವರದಿಗಾರನ ಮೇಲೆ ಹಲ್ಲೆ - ವರದಿ ಮಾಡಿದ್ದ ಪತ್ರಕರ್ತನ ಮೇಲೆ ಹಲ್ಲೆ‌

ಗಂಗಾವತಿಯಲ್ಲಿ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನ ಮೇಲೆ ಹಲ್ಲೆ‌ ಮಾಡಲಾಗಿದೆ.

ವರದಿಗಾರನ ಮೇಲೆ ಹಲ್ಲೆ
ವರದಿಗಾರನ ಮೇಲೆ ಹಲ್ಲೆ
author img

By

Published : Mar 17, 2020, 10:42 AM IST

ಗಂಗಾವತಿ: ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನ ಮೇಲೆ ಕೆಲವರು ಹಲ್ಲೆ‌ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಗರದಲ್ಲಿ ತಡರಾತ್ರಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಮಾಸಪತ್ರಿಕೆಯೊಂದರ ಸಂಪಾದಕ ಹಾಗೂ ಕನ್ನಡಸೇನೆ ಸಂಘಟನೆಯ ಮುಖಂಡ ಚನ್ನಬಸವ ಜೆಕೀನ್ ಎಂದು ಗುರುತಿಸಲಾಗಿದೆ. ಗಾಯಾಳು ಇಲ್ಲಿನ‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಠಾಣೆಯಲ್ಲಿ ಬಸವನಗೌಡ ಕಕ್ಕರಗೋಳ, ಹೈಯತ್ ಪೀರಾ ಹೆಬ್ಬಾಳ ಹಾಗೂ ಗಂಗಾವತಿಯ ಸ್ವಾಮಿ, ಉಮೇಶ, ನಾಗರಾಜ್ ಇತರೆ 15ಜನರ‌ ಮೇಲೆ ದೂರು ದಾಖಲಾಗಿದೆ.

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವರದಿಗಾರ

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಆಶ್ರಯದಲ್ಲಿ ಗಂಗಾವತಿಯಲ್ಲಿ ಮರಳು ದಂಧೆ ನಡೆಸಲಾಗುತ್ತಿದೆ ಎಂದು ಉಲ್ಲೇಖಿಸಿ ಚನ್ನಬಸವ ಜೇಕಿನ್ ವರದಿ ಮಾಡಿದ್ದರು. ಇದನ್ನು ಆಕ್ಷೇಪಿಸಿ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.