ಕುಷ್ಟಗಿ (ಕೊಪ್ಪಳ): ಕರ್ತವ್ಯದ ವೇಳೆ ಕುಷ್ಟಗಿ ತಾಲೂಕು ತಾವರಗೇರಾ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ ನಾಯಕವಾಡಿ ಹೃದಯಘಾತದಿಂದ ನಿಧನರಾಗಿದ್ದಾರೆ. ಕಳೆದ ಬುಧವಾರ ರಾತ್ರಿ ತಾವರಗೇರಾ ಪೊಲೀಸ್ ಠಾಣೆಯಲ್ಲಿ ನಿಗದಿಯಂತೆ ರೌಂಡ್ಸ್ ಮುಗಿಸಿ, ಆವರಣದ ಕುರ್ಚಿಯಲ್ಲಿ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ಇದನ್ನು ಗಮನಿಸಿದ ಠಾಣೆಯ ಪೊಲೀಸರು ಕೂಡಲೇ ಅವರನ್ನು ಸ್ಥಳೀಯ ಸಮುದಾಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಎಎಸ್ಐ ಕೊನೆಯುಸಿರೆಳೆದರು. ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ವೇಳೆ ಕ್ಷಿಪ್ರಪಡೆಯಲ್ಲಿ ಕೆಲಸ ನಿರ್ವಹಿಸಿ, ತಾವರಗೇರ ಪಟ್ಟಣ ಪಂಚಾಯಿತಿ ಚುನಾವಣೆ ಬಂದೋಬಸ್ತ್ ಕರ್ತವ್ಯದಲ್ಲಿದ್ದರು.
ಇವರ ಪತ್ನಿ ಅಕ್ಕಮಹಾದೇವಿ ನಾಯಕವಾಡಿ ಕುಷ್ಟಗಿ ಪುರಸಭೆ ಸದಸ್ಯೆಯಾಗಿದ್ದಾರೆ. ಎಎಸ್ಐ ಬಸವರಾಜ ನಾಯಕವಾಡಿ ಅವರ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.
ಇದನ್ನೂ ಓದಿ: ಬಿಆರ್ಟಿಎಸ್ ಕಾರಿಡಾರ್ನಲ್ಲಿ ಅಕ್ರಮ ಓಡಾಟ: ಕಾರು ಚಾಲಕನಿಗೆ ಬಿತ್ತು 17 ಸಾವಿರ ದಂಡ